ಸಿಬಿಐ ಡಿಐಜಿಯಾಗಿ ಐಪಿಎಸ್ ಅಧಿಕಾರಿ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ಸಾರಾ ಶರ್ಮಾ ಅವರನ್ನು ಸಿಬಿಐ ಉಪ ಮಹಾನಿರ್ದೇಶಕರನ್ನಾಗಿ (ಡಿಐಜಿ) ನೇಮಿಸಿ ಕೇಂದ್ರ ಸಿಬ್ಬಂದಿ ಸಚಿವಾಲಯದ ಶುಕ್ರವಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಸಾರಾ ಶರ್ಮಾ ಅವರನ್ನು ಸಿಬಿಐ ಉಪ ಮಹಾನಿರ್ದೇಶಕರನ್ನಾಗಿ (ಡಿಐಜಿ) ನೇಮಿಸಿ ಕೇಂದ್ರ ಸಿಬ್ಬಂದಿ ಸಚಿವಾಲಯದ ಶುಕ್ರವಾರ ಆದೇಶ ಹೊರಡಿಸಿದೆ.

ಶರ್ಮಾ ಅವರು ಒಡಿಶಾ ಕೇಡರ್‌ನ 2010-ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದಾರೆ. ಅವರು ಐದು ವರ್ಷಗಳ ಕಾಲ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಡಿಐಜಿಯಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ತನಿಖಾ ಸಂಸ್ಥೆಯಲ್ಲಿರುವ ಇಬ್ಬರು ಹಿರಿಯ ಅಧಿಕಾರಿಗಳ ಅಧಿಕಾರಾವಧಿ ವಿಸ್ತರಣೆಗೂ ಅನುಮೋದನೆ ನೀಡಲಾಗಿದೆ. ಮತ್ತೊಂದು ಮೂಲದ ಪ್ರಕಾರ ಡಿಐಜಿ ಪಿ. ಮುರುಗನ್ ಅವರ ಅಧಿಕಾರಾವಧಿಯನ್ನು ಮಾರ್ಚ್ 15, 2027 ರವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ತನಿಖಾ ಸಂಸ್ಥೆಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿರುವ ವಿದ್ಯುತ್ ವಿಕಾಶ್ ಅವರ ಅವಧಿಯನ್ನು ಫೆಬ್ರವರಿ 18, 2025 ರವರೆಗೆ ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com