ಶಿವರಾತ್ರಿ ಸಂಭ್ರಮ, ದೇವಾಲಯಗಳಲ್ಲಿ ಶಿವಸ್ಮರಣೆ, ಭಕ್ತರಿಂದ ಜಾಗರಣೆ

ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಶಿವಸ್ಮರಣೆ ಮಾಡಲಾಗುತ್ತಿದ್ದು, ಭಕ್ತರು ಇಡೀ ರಾತ್ರಿ ಜಾಗರಣೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ಭುವನೇಶ್ವರದ ಲಿಂಗರಾಜ ದೇವಾಲಯ
ಭುವನೇಶ್ವರದ ಲಿಂಗರಾಜ ದೇವಾಲಯ
Updated on

ನವದೆಹಲಿ: ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಶಿವಸ್ಮರಣೆ ಮಾಡಲಾಗುತ್ತಿದ್ದು, ಭಕ್ತರು ಜಾಗರಣೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ದೇವಾಲಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ಹೋಮ, ಹವನ, ಮಹಾ ಮಂಗಳಾರತಿ ಮತ್ತಿತರ ಹಲವು ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಭುವನೇಶ್ವರ, ಮುಂಬೈ, ಪಾಟ್ನಾ ಮತ್ತಿತರ ಕಡೆಗಳಲ್ಲಿ ಶಿವನ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು.

ಬೆಂಗಳೂರಿನರಿನ ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರ ಕಾಡು ಮಲ್ಲೇಶ್ವರ ದೇವಾಲಯ ಮತ್ತಿತರ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮತ್ತಿಕೆರೆ ಮೈದಾನದಲ್ಲಿ ರಾಮಮಂದಿರದ ಜೊತೆಗೆ ರಾಮ ಹಾಗೂ ಶಿವನ ಬೃಹತ್ ಪ್ರತಿಕ್ರಿತಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ರಾತ್ರಿಯಿಡೀ ಜಾಗರಣೆ: ಪ್ರಮುಖ ದೇವಾಲಯಗಳಲ್ಲಿ ರಾತ್ರಿಯಿಡೀ ಜಾಗರಣೆ ವ್ಯವಸ್ಥೆ ಮಾಡಲಾಗಿದೆ. ಜಾಗರಣೆ ಅಂಗವಾಗಿ ನಾಟಕೋತ್ಸವ, ಸಂಗೀತೋತ್ಸವ ಮತ್ತಿತರ ಸಾಂಸ್ಕ್ರೃತಿಕ ಕಾರ್ಯಕ್ರಮಗಳನ್ನು ವಿವಿಧ ಸಂಘ- ಸಂಸ್ಥೆಗಳು ಆಯೋಜಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com