ಮುಂಬೈ: ಸಮೀರ್ ವಾಂಖೆಡೆ ಪತ್ನಿಗೆ ಪಾಕ್ ನಿಂದ ಬೆದರಿಕೆ, ಅಶ್ಲೀಲ ಸಂದೇಶ!

ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ಪತ್ನಿಯೂ ಆಗಿರುವ ನಟಿ ಕ್ರಾಂತಿ ರೆಡ್ಕರ್ ವಾಂಖೆಡೆ ಅವರಿಗೆ ಪಾಕಿಸ್ತಾನದ ನಂಬರ್ ಗಳಿಂದ ಜೀವ ಬೆದರಿಕೆ ಮತ್ತು ಅಶ್ಲೀಲ ಸಂದೇಶಗಳು ಬರುತ್ತಿವೆಯಂತೆ. ಕಳೆದ ವರ್ಷದಿಂದ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ತಿಳಿಸಿದ್ದಾರೆ.
ಪತಿ ಸಮೀರ್ ವಾಂಖೆಡೆ ಅವರೊಂದಿಗೆ ಕ್ರಾಂತಿ ರೆಡ್ಕರ್ ವಾಂಖೆಡೆ ಚಿತ್ರ
ಪತಿ ಸಮೀರ್ ವಾಂಖೆಡೆ ಅವರೊಂದಿಗೆ ಕ್ರಾಂತಿ ರೆಡ್ಕರ್ ವಾಂಖೆಡೆ ಚಿತ್ರ

ಮುಂಬೈ: ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ಪತ್ನಿಯೂ ಆಗಿರುವ ನಟಿ ಕ್ರಾಂತಿ ರೆಡ್ಕರ್ ವಾಂಖೆಡೆ ಅವರಿಗೆ ಪಾಕಿಸ್ತಾನದ ನಂಬರ್ ಗಳಿಂದ ಜೀವ ಬೆದರಿಕೆ ಮತ್ತು ಅಶ್ಲೀಲ ಸಂದೇಶಗಳು ಬರುತ್ತಿವೆಯಂತೆ. ಕಳೆದ ವರ್ಷದಿಂದ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ತಿಳಿಸಿದ್ದಾರೆ.

ಪತಿ ಸಮೀರ್ ವಾಂಖೆಡೆ ಅವರೊಂದಿಗೆ ಕ್ರಾಂತಿ ರೆಡ್ಕರ್ ವಾಂಖೆಡೆ ಚಿತ್ರ
ಆರ್ಯನ್ ಖಾನ್ ಬಂಧನ ಪ್ರಕರಣ: ಸಮೀರ್ ವಾಂಖೆಡೆ ಬಳಿ 22 ಲಕ್ಷ ರೂ ಮೌಲ್ಯದ ರೋಲೆಕ್ಸ್ ವಾಚ್, 4 ದುಬಾರಿ ಫ್ಲಾಟ್ ಗಳು ಪತ್ತೆ!

ಈ ಸಂಬಂಧ ಮುಖ್ಯಮಂತ್ರಿ ಮಹಾರಾಷ್ಟ್ರ, ಉಪ ಮುಖ್ಯಮಂತ್ರಿ ಫಡ್ನವೀಸ್ ಮತ್ತು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿರುವ ಕ್ರಾಂತಿ ರೆಡ್ಕರ್, ನನ್ನ ಮೊಬೈಲ್ ಸಂಖ್ಯೆಗೆ ವಿವಿಧ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಂಬರ್ ನಿಂದ ಕೊಲೆ ಬೆದರಿಕೆಗಳು ಬರುತ್ತಿವೆ. ಇದು ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಪೊಲೀಸರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದೆ" ಎಂದು ಕ್ರಾಂತಿ ರೆಡ್ಕರ್ ಫೋಸ್ಟ್ ಮಾಡಿದ್ದಾರೆ.

ಅಲ್ಲದೇ ಅವರು, ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com