ಅರುಣಾಚಲ ಪ್ರದೇಶದ ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಸೆಲಾ ಸುರಂಗವನ್ನು ನಿರ್ಮಿಸಲಾಗಿದೆ.
ಅರುಣಾಚಲ ಪ್ರದೇಶದ ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಸೆಲಾ ಸುರಂಗವನ್ನು ನಿರ್ಮಿಸಲಾಗಿದೆ.

Sela Tunnel: ವಿಶ್ವದ ಅತಿ ಉದ್ದ ಸೆಲಾ ಪಾಸ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ; ಏನಿದರ ವಿಶೇಷತೆ?

ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯ ಪ್ರವಾಸದ ಎರಡನೇ ದಿನವಾದ ಶನಿವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ವಿಶ್ವದ ಅತಿ ಎತ್ತರದಲ್ಲಿ (13,000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ (Sela Pass) ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.

ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ತಲುಪಲು ಇದು ಏಕೈಕ ಮಾರ್ಗವಾಗಿದೆ. ಪ್ರಾಜೆಕ್ಟ್ ವರ್ತಕ್ ಅಡಿಯಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನಿಂದ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವು ಟ್ರಾನ್ಸ್-ಅರುಣಾಚಲ ಹೆದ್ದಾರಿ ವ್ಯವಸ್ಥೆಯ ಒಂದು ಘಟಕವಾಗಿದೆ. 13,000 ಅಡಿಗಳಷ್ಟು ವಿಶ್ವದ ಅತಿ ಉದ್ದದ ಎರಡು-ಪಥದ ಸುರಂಗವಾಗಿದೆ.

ಸೆಲಾ ಸುರಂಗದ ಒಂದು ನೋಟ
ಸೆಲಾ ಸುರಂಗದ ಒಂದು ನೋಟ
ಅರುಣಾಚಲ ಪ್ರದೇಶದ ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಸೆಲಾ ಸುರಂಗವನ್ನು ನಿರ್ಮಿಸಲಾಗಿದೆ.
ಈಶಾನ್ಯ ರಾಜ್ಯದಲ್ಲಿ ನಮ್ಮ 5 ವರ್ಷಗಳ ಸಾಧನೆಯನ್ನು ಮಾಡಲು ಕಾಂಗ್ರೆಸ್ ಗೆ 20 ವರ್ಷ ತೆಗೆದುಕೊಳ್ಳುತ್ತಿತ್ತು: ಮೋದಿ

ಪ್ರಸ್ತುತ ಸೆಲಾ ಪಾಸ್‌ನಲ್ಲಿ, ಭಾರತೀಯ ಸೇನೆಯ ಸೈನಿಕರು ಮತ್ತು ಪ್ರದೇಶದ ಜನರು ತವಾಂಗ್ ತಲುಪಲು ಬಲಿಪರಾ-ಚರಿದುವಾರ್ ರಸ್ತೆಯನ್ನು ಬಳಸುತ್ತಿದ್ದಾರೆ. ಚಳಿಗಾಲದಲ್ಲಿ ಅತಿಯಾದ ಹಿಮಪಾತದಿಂದಾಗಿ, ಸೆಲಾ ಪಾಸ್‌ನಲ್ಲಿ ತೀವ್ರವಾದ ಹಿಮವು ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ಅಲ್ಲದೆ, ಸೆಲಾ ಪಾಸ್ 30 ತಿರುವುಗಳನ್ನು ಹೊಂದಿದೆ, ಇದು ತುಂಬಾ ಅಂಕುಡೊಂಕಾದವು. ಇದರಿಂದಾಗಿ ಇಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಪ್ರಯಾಣಕ್ಕೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಸಮಯದಲ್ಲಿ ಇಡೀ ತವಾಂಗ್ ವಲಯವು ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಸೆಲಾ ಪಾಸ್ ಸುರಂಗವು ಅಸ್ತಿತ್ವದಲ್ಲಿರುವ ರಸ್ತೆಯನ್ನು ಬೈಪಾಸ್ ಮಾಡುತ್ತದೆ ಮತ್ತು ಇದು ಬೈಸಾಖಿಯನ್ನು ನುರಾನಾಂಗ್‌ಗೆ ಸಂಪರ್ಕಿಸುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com