'ಕಾಂಗ್ರೆಸ್ ಮುಳುಗುತ್ತಿರುವ ಹಡಗು, ರಾಹುಲ್ ಗಾಂಧಿ ಇರೋವರೆಗೂ ಪಕ್ಷಕ್ಕೆ ಉಳಿಗಾಲವಿಲ್ಲ': ಉಚ್ಛಾಟಿತ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ

'ಕಾಂಗ್ರೆಸ್ ಮುಳುಗುತ್ತಿರುವ ಹಡಗು, ರಾಹುಲ್ ಗಾಂಧಿ ಓರ್ವ ಹುಚ್ಚ' ಎಂದು ಕಾಂಗ್ರೆಸ್ ಪಕ್ಷದ ಉಚ್ಛಾಟಿತ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಭಾನುವಾರ ಹೇಳಿದ್ದಾರೆ.
ಉಚ್ಛಾಟಿತ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ
ಉಚ್ಛಾಟಿತ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ
Updated on

ಸಂಭಾಲ್: 'ಕಾಂಗ್ರೆಸ್ ಮುಳುಗುತ್ತಿರುವ ಹಡಗು, ರಾಹುಲ್ ಗಾಂಧಿ ಓರ್ವ ಹುಚ್ಚ' ಎಂದು ಕಾಂಗ್ರೆಸ್ ಪಕ್ಷದ ಉಚ್ಛಾಟಿತ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಭಾನುವಾರ ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಆಚಾರ್ಯ ಕೃಷ್ಣಂ ಅವರು ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರಮಾಣದಲ್ಲಿ ನಾಯಕರು ನಿರ್ಗಮಿಸುತ್ತಿದ್ದಾರೆ. ಕಾಂಗ್ರೆಸ್ ರಾಮ ವಿರೋಧಿ ಮತ್ತು ಸನಾತನ ಧರ್ಮದ ವಿರೋಧಿಯಾಗಿದ್ದು, ಇದರಿಂದಾಗಿ ಅದು ನಾಯಕರು ಮತ್ತು ಸದಸ್ಯರನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಉಚ್ಛಾಟಿತ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ
ಶ್ರೀರಾಮನ ವಿಚಾರದಲ್ಲಿ ರಾಜಿ ಇಲ್ಲ..  ನನ್ನನ್ನು ಬಿಡುಗಡೆ ಮಾಡಿದ್ದಕ್ಕಾಗಿ ಧನ್ಯವಾದಗಳು: ಕಾಂಗ್ರೆಸ್ ಗೆ ಆಚಾರ್ಯ ಪ್ರಮೋದ್ ಕೃಷ್ಣಂ ಟಾಂಗ್

ಇದೇ ವೇಳೆ ಪ್ರಧಾನಿ ಮೋದಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಅವರು, "ನೋಡಿ, ಮನಸ್ಸಿನ ಸ್ಥೀಮಿತ ಕಳೆದುಕೊಂಡ ವ್ಯಕ್ತಿ ಏನು ಬೇಕಾದರೂ ಹೇಳಬಹುದು. ಸಾಮಾನ್ಯವಾಗಿ ಬುದ್ದಿ ಹೀನರು ಹೆಚ್ಚು ಅರ್ಥವಿಲ್ಲದ ಮಾತುಗಳನ್ನು ಆಡುತ್ತಾರೆ.. ಬುದ್ಧಿಹೀನ ವ್ಯಕ್ತಿಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ.. ಕಾಂಗ್ರೆಸ್‌ನ ಹಾಳಾದ ಸ್ಥಿತಿಗೆ ಏಕೈಕ ವ್ಯಕ್ತಿ ಕಾರಣ.. ಅದು ರಾಹುಲ್ ಗಾಂಧಿ..

ರಾಹುಲ್ ಗಾಂಧಿ ಕಾಂಗ್ರೆಸ್‌ನಲ್ಲಿ ಇರುವವರೆಗೂ ಕಾಂಗ್ರೆಸ್ ಅನ್ನು ಉಳಿಸಲು ಸಾಧ್ಯವಿಲ್ಲ. ರಾಮನ ಬಗ್ಗೆ ಅಸಭ್ಯವಾಗಿ ಮಾತನಾಡುವ ಪಕ್ಷದಲ್ಲಿ ಉಳಿಯಲು ಯಾರೂ ಬಯಸುವುದಿಲ್ಲ. ಕಾಂಗ್ರೆಸ್‌ನ ಅನೇಕರು ಕಾಂಗ್ರೆಸ್‌ನಲ್ಲಿಯೇ ಮುಂದುವರಿದರೆ ತಾವು ನಾಶವಾಗುತ್ತೇವೆ ಎಂದು ಅರಿತುಕೊಳ್ಳಬೇಕು ಎಂದರು.

ಅಲ್ಲದೆ ಕಾಂಗ್ರೆಸ್ ತನ್ನ ಶ್ರೀರಾಮನ ವಿರೋಧಿ ನಿಲುವಿನ ಮೂಲಕ ತನ್ನ ರಾಜಕೀಯ ದಿವಾಳಿತನ ಮತ್ತು ಹತಾಶೆಯನ್ನು ಬಯಲಿಗೆಳೆದಿದೆ. ಇದು ಈಗ ರಾಮ ವಿರೋಧಿ ಮತ್ತು ಸನಾತನ ವಿರೋಧಿ ಪಕ್ಷವಾಗಿದೆ. ದೇಶದಲ್ಲಿ ವಾಸಿಸುತ್ತಿದ್ದರೂ ಸನಾತನದ ವಿರುದ್ಧ ನಿಲ್ಲುವವರ ಜೊತೆ ಯಾರು ನಿಲ್ಲುತ್ತಾರೆ ? ಅವರೊಂದಿಗೆ ಯಾರು ಉಳಿಯುತ್ತಾರೆ? ಅದು ಪಕ್ಷದಿಂದ ಹೊರಹೋಗುವ ಪ್ರಸ್ತುತ ಸರಮಾಲೆಯನ್ನು ವಿವರಿಸುತ್ತದೆ ಎಂದರು.

ಉಚ್ಛಾಟಿತ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ
ಪ್ರಧಾನಿ ಮೋದಿ ಹೊಗಳಿದ್ದ ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ನಿಂದ ಉಚ್ಚಾಟನೆ

ಕಾಂಗ್ರೆಸ್ ಮುಳುಗುತ್ತಿರುವ ಹಡಗು

ಕಾಂಗ್ರೆಸ್ ಪಕ್ಷ ಈಗ ಮುಳುಗುತ್ತಿರುವ ಹಡಗು.. ಮುಳುಗುತ್ತಿರುವ ಹಡಗಿನಲ್ಲಿ ಉಳಿಯಲು ಯಾರು ಬಯಸುತ್ತಾರೆ? ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಎಲ್ಲರೂ ರಾಹುಲ್ ಗಾಂಧಿಯವರು ನಡೆಸುತ್ತಿರುವ ಹಡಗಿನಿಂದ ಜಿಗಿಯುತ್ತಾರೆ. ಜನರು ಜಿಗಿದು ಈಜಿ ಸುರಕ್ಷಿತವಾಗಿ ಪ್ರಯಾಣಿಸುತ್ತಾರೆ. ಹಿರಿಯ ನಾಯಕರು ಸೇರಿದಂತೆ ಇನ್ನೂ ಅನೇಕರು ಚುನಾವಣೆಯ ನಡುವೆಯೂ ಕಾಂಗ್ರೆಸ್ ತೊರೆಯಲಿದ್ದಾರೆ. ಆ ಪಕ್ಷ ನಾಯಕರ ಹೇಳಿಕೆಗಳು ಮತ್ತು ನಿರ್ಧಾರಗಳು ಕಾಂಗ್ರೆಸ್ ಅನ್ನು ಕಹಿ ಅಂತ್ಯದತ್ತ ಕೊಂಡೊಯ್ಯುತ್ತಿವೆ ಎಂದರು.

ಕಳ್ಳರ ಗ್ಯಾಂಗ್-INDI ಒಕ್ಕೂಟ

ಎಲ್ಲ ಕಳ್ಳರ ಗ್ಯಾಂಗ್ ಸೇರಿ INDI ಒಕ್ಕೂಟ ರಚನೆ ಮಾಡಿಕೊಂಡಿವೆ. ಎಲ್ಲಾ ಕಳ್ಳರು ಸೇರಿಕೊಂಡು ಗ್ಯಾಂಗ್ ರಚಿಸಿದ್ದಾರೆ. ಆದರೆ, ಅವರು ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಉಚ್ಛಾಟಿತ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ
ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು ಸನಾತನದ ಶಾಪ: ಸ್ವಂತ ಪಕ್ಷದ ವಿರುದ್ಧ ಪ್ರಮೋದ್ ಕೃಷ್ಣಂ ಆಕ್ರೋಶ

ಪ್ರಧಾನಿ ಮೋದಿ ಕುರಿತು ಹೊಗಳಿಕೆ

ಇದೇ ವೇಳೆ ಪ್ರಧಾನಿ ಮೋದಿಯನ್ನು ಹೊಗಳಿದ ಆಚಾರ್ಯ ಕೃಷ್ಣಂ, "ಕಳೆದ 10 ವರ್ಷಗಳಿಂದ ಮೋದಿ ಪ್ರಧಾನಿಯಾಗಿರದಿದ್ದರೆ, ಪಶ್ಚಿಮ ಬಂಗಾಳವು ಈಗ ಬಾಂಗ್ಲಾದೇಶ ಆಗುತ್ತಿತ್ತು, ನರೇಂದ್ರ ಮೋದಿ ನಮ್ಮ ಪ್ರಧಾನಿಯಾಗಿರುವುದು ನಮ್ಮ ಅದೃಷ್ಟ ಎಂದು ನಾನು ನಂಬುತ್ತೇನೆ. ಆಡಳಿತಾರೂಢ ಟಿಎಂಸಿಯ ದುಷ್ಕೃತ್ಯಗಳಿಂದ ಬಂಗಾಳದ ಜನರು ಕೂಡ ದುಃಖಿತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಭಾರಿ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ನಾನು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com