ದೇಶದ ವಿವಿಧೆಡೆ ಚಂದ್ರನ ದರ್ಶನ: ನಾಳೆಯಿಂದ ರಂಜಾನ್ ಉಪವಾಸ ಆರಂಭ

ದೇಶದ ವಿವಿಧ ಭಾಗಗಳಲ್ಲಿ ಚಂದ್ರನ ದರ್ಶನವಾಗಿದ್ದು, ಮುಸ್ಲಿಮರು ಮಂಗಳವಾರದಿಂದ ರಂಜಾನ್ ಉಪವಾಸವನ್ನು ಪ್ರಾರಂಭಿಸುತ್ತಾರೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಚಂದ್ರನ ದರ್ಶನವಾಗಿದ್ದು, ಮುಸ್ಲಿಮರು ಮಂಗಳವಾರದಿಂದ ರಂಜಾನ್ ಉಪವಾಸವನ್ನು ಪ್ರಾರಂಭಿಸುತ್ತಾರೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ತಿಳಿಸಿದೆ.

ಸೋಮವಾರ ರಾಷ್ಟ್ರ ರಾಜಧಾನಿಯ ಬಹದ್ದೂರ್ ಶಾ ಜಾಫರ್ ಮಾರ್ಗದಲ್ಲಿ ಜಮೀಯತ್ ಉಲೇಮಾ-ಎ-ಹಿಂದ್ ಕಾರ್ಯದರ್ಶಿ ಮೌಲಾನಾ ನಿಯಾಜ್ ಅಹ್ಮದ್ ಫಾರೂಕಿ ಅವರ ಅಧ್ಯಕ್ಷತೆಯಲ್ಲಿ ರುಯಾತ್-ಎ-ಹಿಲಾಲ್ ಸಮಿತಿಯ ಸಭೆಯು ನಡೆಯಿತು.

ದೇಶದ ಹಲವು ಭಾಗಗಳಲ್ಲಿ ಚಂದ್ರನ ದರ್ಶನವಾಗಿದೆ ಎಂಬುದು ತಿಳಿದುಬಂದಿದೆ. ಆದ್ದರಿಂದ, ಮೊದಲ ರಂಜಾನ್ ಮಂಗಳವಾರ, ಮಾರ್ಚ್ 12, 2024 ರಂದು ಬರುತ್ತದೆ ಎಂದು ಘೋಷಿಸಲಾಗಿದೆ ಎಂದು ಮುಸ್ಲಿಂ ಸಂಘಟನೆ ತಿಳಿಸಿದೆ.

ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರಮ್ ಅಹ್ಮದ್ ಕೂಡ ಚಂದ್ರನ ದರ್ಶನವಾಗಿದ್ದು, ಮಂಗಳವಾರ ಉಪವಾಸ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ ಅವರು, ಮಸೀದಿಯಿಂದ ಮತ್ತು ದೇಶದ ಹಲವು ಭಾಗಗಳಲ್ಲಿ ಅನೇಕ ಜನರಿಗೆ ಚಂದ್ರ ಸ್ಪಷ್ಟವಾಗಿ ಗೋಚರಿಸಿದೆ ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ರಂಜಾನ್ ಮಾಸದಲ್ಲಿ ಜನಸೇವೆ: ಜಗತ್ತೇ ನಿದ್ದೆ ಮಾಡುವಾಗ ಹಸಿದವರಿಗೆ ಊಟ ನೀಡುವ ಬೆಂಗಳೂರಿನ ವಕೀಲ!

ಪವಿತ್ರ ತಿಂಗಳ ಆರಂಭವನ್ನು ಗುರುತಿಸುವ ಮೂಲಕ ಪ್ರಪಂಚದಾದ್ಯಂತದ ಲಕ್ಷಾಂತರ ಮುಸ್ಲಿಮರು ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ರಂಜಾನ್ ಸಮಯದಲ್ಲಿ, ಮುಸ್ಲೀಮರು ಮುಂಜಾನೆ ಊಟವಾದ 'ಸೆಹ್ರಿ' ನಂತರ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ ಮತ್ತು ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ನೊಂದಿಗೆ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ತಿಂಗಳ ಅಂತ್ಯವನ್ನು ಈದ್ ಉಲ್ ಫಿತ್ರ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com