ಭರೂಚ್: ಹತ್ತನೇ ತರಗತಿ ಪರೀಕ್ಷೆಗೂ ಮುನ್ನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದಕ್ಕೆ ಪೋಷಕರ ಆಕ್ರೋಶ ಭುಗಿಲೆದ್ದ ನಂತರ ಗುಜರಾತ್ ಶಿಕ್ಷಣ ಇಲಾಖೆ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರನ್ನು ಪರೀಕ್ಷಾ ನಿರ್ವಾಹಕ ಹುದ್ದೆಯಿಂದ ಗುರುವಾರ ವಜಾಗೊಳಿಸಿದೆ. ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ ನ (ಜಿಎಸ್‌ಎಚ್‌ಎಸ್‌ಇಬಿ) ಗಣಿತ ಪತ್ರಿಕೆಯ ಮೊದಲು ಭರೂಚ್ ಜಿಲ್ಲೆಯ ಅಂಕಲೇಶ್ವರ ಪಟ್ಟಣದ ಲಯನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಪೋಷಕರ ದೂರಿನ ನಂತರ, ಶಾಲೆಯ ಪ್ರಾಂಶುಪಾಲರೂ ಆಗಿರುವ ಪರೀಕ್ಷಾ ಕೇಂದ್ರದ ನಿರ್ವಾಹಕರಾದ ಇಲಾಬೆನ್ ಸುರತಿಯಾ ಅವರನ್ನು ರಾಜ್ಯ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ನಿರ್ವಾಹಕ ಹುದ್ದೆಯಿಂದ ವಜಾಗೊಳಿಸಿದೆ. ಜಿಲ್ಲಾ ಶಿಕ್ಷಣಾಧಿಕಾರಿ ಸ್ವಾತಿ ರಾವ್ ಪೋಷಕರೊಂದಿಗೆ ಸಭೆ ನಡೆಸಿದ ನಂತರ ಈ ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದೇನೆ. ಈ ಸಂಬಂಧ ಪೋಷಕರು ಕೂಡಾ ಅರ್ಜಿ ಸಲ್ಲಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರದ ನಿರ್ವಾಹಕರನ್ನು ಬದಲಾಯಿಸುವ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ರವೋಲ್ ತಿಳಿಸಿದರು.
ಪರೀಕ್ಷೆಯ ಮೊದಲು ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕುವಂತೆ ಶಾಲಾ ಸಿಬ್ಬಂದಿಯಿಂದ ಹೇಗೆ ಒತ್ತಡ ಹೇರಲಾಯಿತು ಎಂದು ಪೋಷಕರು ವಿವರಿಸಿದರು. ಈ ಮಧ್ಯೆ ಪರೀಕ್ಷೆಗೆ ಯಾವುದೇ ನಿರ್ದಿಷ್ಟ ಸಮವಸ್ತ್ರವನ್ನು ನಿಗದಿಪಡಿಸಿಲ್ಲ, ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಯಾವುದೇ ವಾದ ಸಭ್ಯ ಉಡುಪುಗಳನ್ನು ಧರಿಸಬಹುದು ಎಂದು ಬೋರ್ಡ್ ತಿಳಿಸಿದೆ.
Advertisement