ಪಶ್ಚಿಮ ಬಂಗಾಳ: ಟಿಎಂಸಿಯ ಇಬ್ಬರು ಹಾಲಿ ಸಂಸದರು ಬಿಜೆಪಿ ಸೇರ್ಪಡೆ

ತೃಣಮೂಲ ಕಾಂಗ್ರೆಸ್‌ನ ಇಬ್ಬರು ಹಾಲಿ ಸಂಸದರು ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೋಲ್ಕತಾ: ಲೋಕಸಭೆ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಹಿನ್ನೆಡೆಯಾಗಿದ್ದು, ತೃಣಮೂಲ ಕಾಂಗ್ರೆಸ್‌ನ ಇಬ್ಬರು ಹಾಲಿ ಸಂಸದರು ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬರಾಕ್‌ಪುರ ಸಂಸದ ಅರ್ಜುನ್ ಸಿಂಗ್ ಮತ್ತು ತಮ್ಲುಕ್ ಸಂಸದ ದಿಬ್ಯೇಂದು ಅಧಿಕಾರಿ ಅವರಿಗೆ ಈ ಬಾರಿ ಟಿಎಂಸಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಸೇರಿದ್ದಾರೆ.

ಲೋಕಸಭೆ ಚುನಾವಣೆಗೆ ಟಿಎಂಸಿಯ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಟ್ಟ ಕೆಲವೇ ದಿನಗಳಲ್ಲಿ ಟಿಎಂಸಿ ತೊರೆಯುವುದಾಗಿ ಅರ್ಜುನ್ ಸಿಂಗ್ ಘೋಷಿಸಿದ್ದರು.

ಸಾಂದರ್ಭಿಕ ಚಿತ್ರ
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ; ಹಿಂದಿನಿಂದ ತಳ್ಳಿದ್ದು ಯಾರೆಂಬ ಬಗ್ಗೆ SIT ತನಿಖೆ

ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಸಹೋದರ, ತಾಮ್ಲುಕ್ ಅಧಿಕಾರಿ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ನಾಯಕರಾದ ದುಷ್ಯಂತ್ ಗೌತಮ್ ಮತ್ತು ಅಮಿತ್ ಮಾಳವೀಯ ಸಮ್ಮುಖದಲ್ಲಿ ಈ ಇಬ್ಬರು ಸಂಸದರು ಬಿಜೆಪಿಗೆ ಸೇರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com