ಆರ್ಥಿಕ ಸಂಕಷ್ಟದ ನಡುವೆಯೂ ಪಾಕ್ ಸೇನೆ ನಮಗೆ ಅಪಾಯಕಾರಿ: ಸಿಡಿಎಸ್

ಸಿಡಿಎಸ್ ಅನಿಲ್ ಚೌಹಾಣ್ ಪಾಕ್ ಸೇನೆಯ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನ ಆರ್ಥಿಕ ಸಂಕಷ್ಟದಲ್ಲಿದ್ದರೂ, ನಮಗೆ ಅಪಾಯಕಾರಿಯಾಗಿದೆ ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಸಿಡಿಎಸ್ ಅನಿಲ್ ಚೌಹಾಣ್
ಸಿಡಿಎಸ್ ಅನಿಲ್ ಚೌಹಾಣ್ Online Desk
Updated on

ನವದೆಹಲಿ: ಸಿಡಿಎಸ್ ಅನಿಲ್ ಚೌಹಾಣ್ ಪಾಕ್ ಸೇನೆಯ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನ ಆರ್ಥಿಕ ಸಂಕಷ್ಟದಲ್ಲಿದ್ದರೂ, ನಮಗೆ ಅಪಾಯಕಾರಿಯಾಗಿದೆ ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಪಾಕ್ ನ ಸಾಮರ್ಥ್ಯ ಹಾಗೂ ಸೇನೆಯ ವಿಷಯದಲ್ಲಿ ಯಾವುದೇ ಹಾನಿಯೂ ಉಂಟಾಗಿಲ್ಲ, ಪಾಕ್ ಸೇನೆ ನಮಗೆ ಅಪಾಯಕಾರಿಯಾಗಿಯೇ ಮುಂದುವರೆದಿದೆ ಎಂದು ಹೇಳಿದ್ದಾರೆ.

ಸಿಡಿಎಸ್ ಅನಿಲ್ ಚೌಹಾಣ್
ಪಾಕಿಸ್ತಾನ ಬಿಜೆಪಿಗೆ ಶತ್ರುದೇಶ, ನಮಗಲ್ಲ ಹೇಳಿಕೆ: ಬಿ.ಕೆ. ಹರಿಪ್ರಸಾದ್ ವಿರುದ್ಧ ಬಿಜೆಪಿ ವಾಗ್ದಾಳಿ

ನವದೆಹಲಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಸಿಡಿಎಸ್ "ನಮ್ಮ ಗಡಿಗಳನ್ನು ನೋಡಿಕೊಳ್ಳಲು" ಭಾರತವು ಸಂಪನ್ಮೂಲಗಳನ್ನು ಹೊಂದಿದೆ, ವಿಶೇಷವಾಗಿ ಉತ್ತರದ ವಿವಾದಿತ ಗಡಿಗಳನ್ನು ನೋಡಿಕೊಳ್ಳಲು ಸಂಪನ್ಮೂಲಗಳನ್ನು ಚೆನ್ನಾಗಿ ಹೊಂದಿದೆ ಎಂದು ಹೇಳಿದ್ದಾರೆ. 21ನೇ ಶತಮಾನದಲ್ಲಿ ಭಾರತಕ್ಕೆ ಎದುರಾಗಿರುವ ಕೆಲವು ದೊಡ್ಡ ಭದ್ರತಾ ಸವಾಲುಗಳ ಕುರಿತ ಪ್ರಶ್ನೆಗೆ ಉತ್ತರವಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

ಸಿಡಿಎಸ್ ಅನಿಲ್ ಚೌಹಾಣ್
ಪಾಕಿಸ್ತಾನ ಚುನಾವಣೆ: 100 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಬೆಂಬಲಿತ ಪಪಕ್ಷೇತರರಿಗೆ ಗೆಲುವು, 'ಏಕೀಕೃತ ಸರ್ಕಾರ'ಕ್ಕೆ ಸೇನೆ ಕರೆ

"ನೀವು ಸಶಸ್ತ್ರ ಪಡೆಗಳನ್ನು ನೋಡಿದರೆ, ದೊಡ್ಡ ಸವಾಲು ಹೆಚ್ಚಾಗಿ ಬಾಹ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ಅವರೇ ತಕ್ಷಣದ ಆತಂಕವಾಗಿದ್ದಾರೆ. ಆದರೆ ಬಾಹ್ಯ ಸವಾಲು ಕೂಡ ಒಂದು ರಾಷ್ಟ್ರವನ್ನು ಒಂದುಗೂಡಿಸುತ್ತದೆ. ನಾವು ಅದನ್ನು ಕಾರ್ಗಿಲ್‌ನಲ್ಲಿ ನೋಡಿದ್ದೇವೆ, ಗಲ್ವಾನ್ ನಲ್ಲಿ ನಾವು ಅದನ್ನು ನೋಡಿದ್ದೇವೆ ಎಂದು ಜನರಲ್ ಚೌಹಾನ್ ಹೇಳಿದ್ದಾರೆ.

ಇಂಡಿಯಾ ಟುಡೇ ಕಾನ್ಕ್ಲೇವ್ 2024 ರ ವಿಷನ್ ನ್ಯಾಷನಲ್ ಸೆಕ್ಯುರಿಟಿ: ದಿ ಚಾಲೆಂಜಸ್ ಬಿಫೋರ್ ದಿ ಇಂಡಿಯನ್ ಮಿಲಿಟರಿ' ವಿಷಯದ ಮೇಲೆ ಸಂವಾದದಲ್ಲಿ ಸಿಡಿಎಸ್ ಮಾತನಾಡಿದ್ದು "ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ, ನಮ್ಮ ತಕ್ಷಣದ ಸವಾಲು ಚೀನಾದ ಉಗಮ ಮತ್ತು ಇತ್ಯರ್ಥವಾಗದ ಗಡಿ ಸಮಸ್ಯೆಯಾಗಿದೆ. ನಮಗೆ ಇಬ್ಬರು ನೆರೆಯವರಿದ್ದಾರೆ, ಇಬ್ಬರೂ ನಮಗೆ ಎದುರಾಳಿಯಾಗಿದ್ದಾರೆ. ಇಬ್ಬರೂ ತಮ್ಮ ಸ್ನೇಹವು ಹಿಮಾಲಯಕ್ಕಿಂತ ಹೆಚ್ಚು ಮತ್ತು ಸಾಗರಕ್ಕಿಂತ ಆಳವಾಗಿದೆ ಎಂದು ಪ್ರತಿಪಾದಿಸುತ್ತಾರೆ. ಮತ್ತು ಅವೆರಡೂ ಪರಮಾಣು ಸಾಮರ್ಥ್ಯವನ್ನು ಹೊಂದಿವೆ ಎಂದು ಸಿಡಿಎಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com