RSS ಸಾಮಾನ್ಯ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಪುನರಾಯ್ಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರಾಯ್ಕೆ ಮಾಡಲಾಗಿದೆ.
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರಾಯ್ಕೆ ಮಾಡಲಾಗಿದೆ.

ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಆಗಿ ಮರು ಆಯ್ಕೆಯಾಗಿದ್ದಾರೆ. ಸಂಘ ಪರಿವಾರದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) 2024-2027ರ ಮೂರು ವರ್ಷಗಳ ಅವಧಿಗೆ ಆರೆಸ್ಸೆಸ್‌ನ ನಂ. 2 ಹುದ್ದೆಗೆ ಹೊಸಬಾಳೆ ಅವರನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ದತ್ತಾತ್ರೇಯ ಹೊಸಬಾಳೆ
ಕೇರಳ: ಹಿರಿಯ RSS ನಾಯಕ, ವಿಚಾರವಾದಿ ಆರ್ ಹರಿ ನಿಧನ

ಆರು ವರ್ಷಗಳ ನಂತರ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿ ನಾಗ್ಪುರದಲ್ಲಿ ಸಭೆ ನಡೆಯುತ್ತಿದೆ. ಆರ್‌ಎಸ್‌ಎಸ್‌ನ ವಿವಿಧ ಸಂಘಟನೆಗಳ 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ನಾಗ್ಪುರದಲ್ಲಿ ನಡೆಯುತ್ತಿರುವ ಎಬಿಪಿಎಸ್ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದ್ದು, 9 ವರ್ಷಗಳ ಕಾಲ ಮೂರು ಅವಧಿಗೆ ಹುದ್ದೆಯನ್ನು ಅಲಂಕರಿಸಿದ ಸುರೇಶ್ 'ಭೈಯಾಜಿ' ಜೋಶಿ ಅವರ ಬದಲಿಗೆ 2021 ರಿಂದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಪ್ರಸ್ತುತ ಡಾ. ಮೋಹನ್‌ ಭಾಗವತ್‌ ಅವರು ನಂ.1 ಸ್ಥಾನವಾದ ಸರಸಂಘಚಾಲಕ್‌ ಪದವಿಯಲ್ಲಿದ್ದು, ಅವರ ನಂತರದ ಸ್ಥಾನದಲ್ಲಿ ಅಂದರೆ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರು ಕಾರ್ಯ ನಿರ್ವಹಿಸಲಿದ್ದಾರೆ.

70 ವರ್ಷದ ದತ್ತಾತ್ರೇಯ ಹೊಸಬಾಳೆ ಕರ್ನಾಟಕದ ಶಿವಮೊಗ್ಗದ ಸೊರಬ ಮೂಲದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com