ಪುಣೆ: ಪುಣೆ ಐಸಿಸ್ ಮಾಡ್ಯುಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು 11 ಆರೋಪಿಗಳ ನಾಲ್ಕು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿದೆ. ಕೊಂಧ್ವಾದಲ್ಲಿ ಜಪ್ತಿ ಮಾಡಲಾದ ಆಸ್ತಿಗಳು ಮೂವರು ತಲೆಮರೆಸಿಕೊಂಡಿರುವವರು ಸೇರಿದಂತೆ 11 ಆರೋಪಿಗಳೊಂದಿಗೆ ಸಂಬಂಧ ಹೊಂದಿವೆ ಎಂದು ಎನ್‌ಐಎ ಭಾನುವಾರ ತಿಳಿಸಿದೆ.
ದೇಶದಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜಾಲವನ್ನು ಕಿತ್ತೊಗೆಯಲು ಎನ್ಐಎಯ ಮುಂದುವರೆದ ಕ್ರಮವಾಗಿದೆ. ಜಪ್ತಿ ಮಾಡಲಾದ ನಾಲ್ಕು ಆಸ್ತಿಗಳನ್ನು ಐಇಡಿ ತಯಾರಿಕೆ ಮತ್ತು ಅದರ ತರಬೇತಿ, ಭಯೋತ್ಪಾದಕ ಕೃತ್ಯಗಳ ಯೋಜನೆಗಾಗಿ ಬಳಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಈ ಪ್ರಕರಣದಲ್ಲಿ ಎನ್‌ಐಎ ಈಗಾಗಲೇ ಎಲ್ಲಾ 11 ಮಂದಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಆರೋಪ ಹೊರಿಸಿದೆ.
Advertisement