ಲೋಕಸಭಾ ಚುನಾವಣೆ: ತಮಿಳುನಾಡಿನ 9 ಸ್ಥಾನಗಳಲ್ಲಿ ಕಾಂಗ್ರೆಸ್, 21ರಲ್ಲಿ ಡಿಎಂಕೆ ಸ್ಪರ್ಧೆ

ಸುದೀರ್ಘ ಮಾತುಕತೆ ನಂತರ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಡಿಯಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಕ್ಷೇತ್ರಗಳನ್ನು ಸೋಮವಾರ ಕೊನೆಗೂ ಅಂತಿಮಗೊಳಿಸಲಾಗಿದೆ.
ಎಂಕೆ ಸ್ಟಾಲಿನ್ - ಸೆಲ್ವಪೆರುಂತಗೈ
ಎಂಕೆ ಸ್ಟಾಲಿನ್ - ಸೆಲ್ವಪೆರುಂತಗೈ

ಚೆನ್ನೈ: ಸುದೀರ್ಘ ಮಾತುಕತೆ ನಂತರ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಡಿಯಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಕ್ಷೇತ್ರಗಳನ್ನು ಸೋಮವಾರ ಕೊನೆಗೂ ಅಂತಿಮಗೊಳಿಸಲಾಗಿದೆ. 39 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ತಮಿಳುನಾಡಿನ 9 ಮತ್ತು ಪುದುಚೇರಿಯಲ್ಲಿ 1 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಮತ್ತು ಆಡಳಿತರೂಢ ಡಿಎಂಕೆ 21 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಇಂದು ಡಿಎಂಕೆ ಕೇಂದ್ರ ಕಚೇರಿಯಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಅವರು ಸಹಿ ಹಾಕಲಾದ ಒಪ್ಪಂದದ ಪ್ರಕಾರ, 2019 ರಲ್ಲಿ ತಮಿಳುನಾಡಿನಲ್ಲಿ ಸ್ಪರ್ಧಿಸಿದ್ದ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳನ್ನು ಮರಳಿ ಪಡೆದಿದೆ. ಕಾಂಗ್ರೆಸ್ ತಿರುವಳ್ಳೂರು(ಎಸ್‌ಸಿ), ಶಿವಗಂಗಾ, ಕೃಷ್ಣಗಿರಿ, ಕರೂರ್, ವಿರುದುನಗರ ಮತ್ತು ಕನ್ಯಾಕುಮಾರಿಯಲ್ಲಿ ಮತ್ತೆ ಸ್ಪರ್ಧಿಸಲಿದೆ.

2019 ರಲ್ಲಿ ಗೆದ್ದ ಪುದುಚೇರಿ ಕ್ಷೇತ್ರ ಸೇರಿದಂತೆ ಮೂರು ಹೊಸ ಸ್ಥಾನಗಳನ್ನು ಪಕ್ಷಕ್ಕೆ ನೀಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಡಲೂರು, ಮೈಲಾಡುತುರೈ ಮತ್ತು ತಿರುನಲ್ವೇಲಿಯಿಂದ ಸ್ಪರ್ಧಿಸಲಿದೆ.

ಎಂಕೆ ಸ್ಟಾಲಿನ್ - ಸೆಲ್ವಪೆರುಂತಗೈ
ಮೂರ್ನಾಲ್ಕು ಹಂತಗಳಲ್ಲಿ ಲೋಕಸಭೆ ಚುನಾವಣೆ ಮುಗಿಯಬೇಕಿತ್ತು: 7 ಹಂತದ ಮತದಾನಕ್ಕೆ ಖರ್ಗೆ ಆಕ್ಷೇಪ

ಡಿಎಂಕೆ ಕಳೆದ ಬಾರಿ ಗೆದ್ದಿದ್ದ ಕಡಲೂರು ಮತ್ತು ತಿರುನಲ್ವೇಲಿಯನ್ನು ಈ ಬಾರಿ ಕಾಂಗ್ರೆಸ್‌ಗೆ ಹಂಚಿಕೆ ಮಾಡಿದೆ. ಕಡಲೂರಿನ ಹಾಲಿ ಡಿಎಂಕೆ ಸಂಸದ ಟಿಆರ್‌ವಿಎಸ್ ರಮೇಶ್ ಕೊಲೆ ಪ್ರಕರಣ ಎದುರಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. ತಿರುನಲ್ವೇಲಿಯ ಡಿಎಂಕೆ ಸಂಸದ ಎಸ್.ಜ್ಞಾನತಿರವಿಯಂ ಕೂಡ ಹಲವು ಆರೋಪಗಳನ್ನು ಎದುರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com