ಜ್ಞಾನವಾಪಿ ಮಸೀದಿ ನೆಲಮಾಳಿಗೆ ಪ್ರಕರಣ: ಏಪ್ರಿಲ್ 11ಕ್ಕೆ ವಿಚಾರಣೆ

ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 11ರಂದು ನಡೆಸುವುದಾಗಿ ವಾರಣಾಸಿ ಕೋರ್ಟ್ ಮಂಗವಾರ ಹೇಳಿದೆ.
ಜ್ಞಾನವಾಪಿ ಪ್ರಕರಣ
ಜ್ಞಾನವಾಪಿ ಪ್ರಕರಣ
Updated on

ವಾರಣಾಸಿ: ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 11ರಂದು ನಡೆಸುವುದಾಗಿ ವಾರಣಾಸಿ ಕೋರ್ಟ್ ಮಂಗವಾರ ಹೇಳಿದೆ.

ವಾರಣಾಸಿ ಜಿಲ್ಲಾ ನ್ಯಾಯಾಲಯವು ಇತ್ತೀಚಿಗೆ ಹಿಂದೂ ಪ್ರಾರ್ಥನೆಗೆ ಅನುಮತಿ ನೀಡಿದ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯ ಮೇಲೆ ಮುಸ್ಲಿಂ ಭಕ್ತರು ನಡೆಯುವುದನ್ನು ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 11 ರಂದು ನಿಗದಿಪಡಿಸಿದೆ.

ಜ್ಞಾನವಾಪಿ ಪ್ರಕರಣ
ಜ್ಞಾನವಾಪಿ ಮಸೀದಿ: ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂಗಳು

ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, ಮುಸ್ಲಿಂ ಕಡೆಯವರು ರಂಜಾನ್ ತಿಂಗಳಾಗಿರುವುದರಿಂದ ಉಪವಾಸ ಮಾಡುತ್ತಿದ್ದೇವೆ ಎಂದು ಮಂಗಳವಾರ ಜಿಲ್ಲಾ ಉಸ್ತುವಾರಿ ನ್ಯಾಯಾಧೀಶ ಅನಿಲ್ ಕುಮಾರ್ ಅವರ ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ಅವರ ಪರ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದರು.ಈ ಕುರಿತು ನ್ಯಾಯಾಲಯವು ಏಪ್ರಿಲ್ 11 ರಂದು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ ಎಂದು ಅವರು ಹೇಳಿದರು.

ಸೆಲ್ಲಾರ್‌ನ ಮೇಲ್ಛಾವಣಿ ತುಂಬಾ ಹಳೆಯದು ಮತ್ತು ದುರ್ಬಲವಾಗಿದೆ ಎಂದು ಹಿಂದೂ ಕಡೆಯವರು ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ. 'ವ್ಯಾಸ್ ತೆಹ್ಖಾನಾ' ಎಂದೂ ಕರೆಯಲ್ಪಡುವ ಈ ನೆಲಮಾಳಿಗೆಯ ಕಂಬಗಳಿಗೆ ದುರಸ್ತಿ ಅಗತ್ಯವಿದೆ ಎಂದು ಅದು ಹೇಳಿದೆ.

ಜ್ಞಾನವಾಪಿ ಪ್ರಕರಣ
ಜ್ಞಾನವಾಪಿ ಬಳಿಕ ಧಾರ್‌ನ ಭೋಜಶಾಲೆಯಲ್ಲಿ ASI ಸಮೀಕ್ಷೆಗೆ ಇಂದೋರ್ ಹೈಕೋರ್ಟ್‌ನ ಮಹತ್ವದ ಆದೇಶ!

ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸುವಾಗ, ಜ್ಞಾನವಾಪಿ ಮಸೀದಿಯ 'ವ್ಯಾಸ್ ತೆಹ್ಖಾನಾ'ದಲ್ಲಿ ಹಿಂದೂ ಪ್ರಾರ್ಥನೆಗಳು ಮುಂದುವರಿಯುತ್ತವೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ, ಕೆಲವು ದಿನಗಳ ನಂತರ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com