ಜೆಎಂಎಂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶಿಬು ಸೊರೆನ್ ಸೊಸೆ ರಾಜೀನಾಮೆ!

ಕುಟುಂಬ ಕಲಹದಿಂದಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ ಎಲ್ಲಾ ಸ್ಥಾನಗಳಿಗೆ ಶಿಬು ಸೊರೆನ್ ಸೊಸೆ, ಜಾಮಾ ಶಾಸಕಿ ಸೀತಾ ಸೊರೆನ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರಿಷ್ಠ ಮತ್ತು ಅವರ ಮಾವ ಶಿಬು ಸೊರೆನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸೀತಾ, ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಾರೆ.
ಶಿಬು ಸೊರೆನ್ ಸೊಸೆ ಸೀತಾ ಸೊರೆನ್
ಶಿಬು ಸೊರೆನ್ ಸೊಸೆ ಸೀತಾ ಸೊರೆನ್
Updated on

ನವದೆಹಲಿ: ಕುಟುಂಬ ಕಲಹದಿಂದಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ ಎಲ್ಲಾ ಸ್ಥಾನಗಳಿಗೆ ಶಿಬು ಸೊರೆನ್ ಸೊಸೆ, ಜಾಮಾ ಶಾಸಕಿ ಸೀತಾ ಸೊರೆನ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರಿಷ್ಠ ಮತ್ತು ಅವರ ಮಾವ ಶಿಬು ಸೊರೆನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸೀತಾ, ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಾರೆ.

ಪತಿ ದುರ್ಗಾ ಸೊರೆನ್ ಅವರ ನಿಧನದ ನಂತರ ಪಕ್ಷ ತನಗೆ ಮತ್ತು ಕುಟುಂಬಕ್ಕೆ ಸೂಕ್ತ ಬೆಂಬಲವನ್ನು ನೀಡಲು ವಿಫಲವಾಗಿದೆ ಎಂದು ಹೇಳಿದ್ದಾರೆ. ತಾನು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇಷ್ಟವಿಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಪಕ್ಷದ ತತ್ವಗಳು ಅದರ ನೀತಿಗಳೊಂದಿಗೆ ಹೊಂದಿಕೆಯಾಗದ ಜನರಿಗೆ ಅವಕಾಶ ಕಲ್ಪಿಸುವ ಮೂಲಕ ಮೂಲ ಮೌಲ್ಯಗಳಿಂದ ವಿಚಲನವನ್ನು ಸೂಚಿಸುತ್ತಿದೆ ಎಂದು ಸೀತಾ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ನನಗೆ ಅರಿವಾಗಿದೆ. ನನ್ನ ರಾಜೀನಾಮೆಯನ್ನು ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿಬು ಸೊರೆನ್ ಸೊಸೆ ಸೀತಾ ಸೊರೆನ್
ದೇಶದಲ್ಲೇ ಮೊದಲು: ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ ಧನ ಜಾರಿಗೊಳಿಸಿದ ಜಾರ್ಖಂಡ್ ಸಿಎಂ!

ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ವಕ್ತಾರ, ಸುಪ್ರಿಯೋ ಭಟ್ಟಾಚಾರ್ಯ, ಸೀತಾ ರಾಜೀನಾಮೆ ನೀಡುವ ಬಗ್ಗೆ ಕೇಳಿದ್ದೇನೆ. ಆದರೆ, ಅಧಿಕೃತ ಪತ್ರ ಇನ್ನೂ ತಲುಪಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com