ಲೋಕಸಭೆ ಚುನಾವಣೆ: ತಮಿಳುನಾಡಿನ 21 ಕ್ಷೇತ್ರಗಳಿಗೆ ಡಿಎಂಕೆ ಅಭ್ಯರ್ಥಿಗಳ ಘೋಷಣೆ, ಪ್ರಣಾಳಿಕೆ ಸಹ ಬಿಡುಗಡೆ

ಏಪ್ರಿಲ್ 19 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ 21 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಪ್ರಣಾಳಿಕೆ ಬಿಡುಗಡೆ
ಪ್ರಣಾಳಿಕೆ ಬಿಡುಗಡೆ

ಚೆನ್ನೈ: ಏಪ್ರಿಲ್ 19 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ 21 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ, ಹಾಲಿ ಸಂಸದರಾದ ಕನಿಮೋಳಿ, ಟಿಆರ್ ಬಾಲು ಮತ್ತು ಎ ರಾಜಾ ಅವರನ್ನು ಮತ್ತೆ ಕಣಕ್ಕಿಳಿಸಿದೆ.

ಇದು ಉಳಿದ 18 ಸ್ಥಾನಗಳನ್ನು ಡಿಎಂಕೆ ತನ್ನ ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡ ಪಕ್ಷಗಳು ಮತ್ತು VCK ಗೆ ಹಂಚಿಕೆ ಮಾಡಿದೆ.

ಲೋಕಸಭೆ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಸಹ ಡಿಎಂಕೆ ಇಂದು ಬಿಡುಗಡೆ ಮಾಡಿದ್ದು, ರಾಜ್ಯಪಾಲರ ನೇಮಕಾತಿ ವೇಳೆ ರಾಜ್ಯಗಳ ಅಭಿಪ್ರಾಯ ಪಡೆಯಬೇಕು ಮತ್ತು 356ನೇ ವಿಧಿಯ ರದ್ದತಿಯಂತಹ ಇತರ ವಿಷಯಗಳನ್ನು ಪ್ರಸ್ತಾಪಿಸಿದೆ. ಅಲ್ಲದೆ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡುವ ಭರವಸೆಯನ್ನು ಸಹ ನೀಡಿದೆ.

ಪ್ರಣಾಳಿಕೆ ಬಿಡುಗಡೆ
ಲೋಕಸಭಾ ಚುನಾವಣೆ: ತಮಿಳುನಾಡಿನ 9 ಸ್ಥಾನಗಳಲ್ಲಿ ಕಾಂಗ್ರೆಸ್, 21ರಲ್ಲಿ ಡಿಎಂಕೆ ಸ್ಪರ್ಧೆ

ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ತಮಿಳುನಾಡು ಮತ್ತು ಪುದುಚೇರಿಯ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ಡಿಎಂಕೆ ನೇತೃತ್ವದ ಮೈತ್ರಿಕೂಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಚೆನ್ನೈನ ಹಾಲಿ ಸಂಸದೆ ತಮಿಝಾಚಿ ತಂಗಪಾಂಡಿಯನ್ ಸೇರಿದಂತೆ ಮೂವರು ಮಹಿಳೆಯರನ್ನು ಆಡಳಿತ ಪಕ್ಷ ಡಿಎಂ ಕಣಕ್ಕಿಳಿಸಿದ್ದು, 11 ಹೊಸ ಮುಖಗಳಿಗೆ ಈ ಬಾರಿ ಅವಕಾಶ ನೀಡಿದೆ.

ದಯಾನಿಧಿ ಮಾರನ್, ಎಸ್ ಜಗತ್ರಕ್ಷಕನ್, ಕಲಾನಿಧಿ ವೀರಸಾಮಿ, ಕತಿರ್ ಆನಂದ್ ಮತ್ತು ಸಿ ಎನ್ ಅಣ್ಣಾದೊರೈ ಅವರನ್ನೂ ಉಳಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com