ಅಸ್ಸಾಂ STF ದೊಡ್ಡ ಯಶಸ್ಸು: Islamic State ಮುಖ್ಯಸ್ಥ ಹ್ಯಾರಿಸ್ ಫಾರೂಕಿ, ಆತನ ಸಹಚರನ ಬಂಧನ

ಭಯೋತ್ಪಾದಕರ ಸಂಚು ಭೇದಿಸುವಲ್ಲಿ ಅಸ್ಸಾಂ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಅಸ್ಸಾಂ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಧುಬ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆ - ಇಸ್ಲಾಮಿಕ್ ಸ್ಟೇಟ್ ಇರಾಕ್ ಸಿರಿಯಾ (ಐಸಿಸ್) ನ ಭಾರತೀಯ ಘಟಕದ ಮುಖ್ಯಸ್ಥನನ್ನು ಬಂಧಿಸಿದೆ.
ಬಂಧಿತ ಉಗ್ರರು ಹ್ಯಾರಿಸ್ ಫಾರೂಕಿ ಮತ್ತು ರೆಹಾನ್
ಬಂಧಿತ ಉಗ್ರರು ಹ್ಯಾರಿಸ್ ಫಾರೂಕಿ ಮತ್ತು ರೆಹಾನ್

ಭಯೋತ್ಪಾದಕರ ಸಂಚು ಭೇದಿಸುವಲ್ಲಿ ಅಸ್ಸಾಂ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಅಸ್ಸಾಂ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಧುಬ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆ - ಇಸ್ಲಾಮಿಕ್ ಸ್ಟೇಟ್ ಇರಾಕ್ ಸಿರಿಯಾ (ಐಸಿಸ್) ನ ಭಾರತೀಯ ಘಟಕದ ಮುಖ್ಯಸ್ಥನನ್ನು ಬಂಧಿಸಿದೆ.

ಬಂಧಿತ ಉಗ್ರನನ್ನು ಹ್ಯಾರಿಸ್ ಫಾರೂಕಿ ಎಂದು ಗುರುತಿಸಲಾಗಿದೆ. ಅಸ್ಸಾಂ ಪೊಲೀಸರು ಫಾರೂಕಿಯ ಸಹಚರನನ್ನು ಸಹ ಬಂಧಿಸಿದ್ದಾರೆ. ಬಾಂಗ್ಲಾದೇಶ ಗಡಿಯಿಂದ ಭಾರತಕ್ಕೆ ಪ್ರವೇಶಿಸಿದ್ದ ಫಾರೂಕಿ ಮತ್ತು ಆತನ ಸಹಚರ ಅನುಗಾರ್ ಸಿಂಗ್ ನನ್ನು ಧುಬ್ರಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಹಸ್ಯ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸಿಬ್ಬಂದಿ ಧುಬ್ರಿಯ ಧರ್ಮಶಾಲಾ ಪ್ರದೇಶದಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫಾರೂಕಿ ಮತ್ತು ಅನುರಾಗ್ ನನ್ನು ಬಂಧಿಸಿದ ನಂತರ, ಅಸ್ಸಾಂ ಪೊಲೀಸ್‌ನ ಎಸ್‌ಟಿಎಫ್ ಇಬ್ಬರನ್ನೂ ಗುವಾಹಟಿ ಪ್ರಧಾನ ಕಚೇರಿಗೆ ಕರೆದೊಯ್ದರು.

ಬಂಧಿತ ಉಗ್ರರು ಹ್ಯಾರಿಸ್ ಫಾರೂಕಿ ಮತ್ತು ರೆಹಾನ್
ಪುಣೆ ಐಸಿಸ್ ಮಾಡ್ಯುಲ್ ಪ್ರಕರಣ: 11 ಆರೋಪಿಗಳ ಆಸ್ತಿ ಜಪ್ತಿ ಮಾಡಿದ ಎನ್ ಐಎ

ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಕಿ ಉತ್ತರಾಖಂಡದ ಡೆಹ್ರಾಡೂನ್‌ನ ಚಕ್ರತಾ ಪ್ರದೇಶದ ನಿವಾಸಿ. ಆತ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥರಾಗಿದ್ದಾನೆ. ಪೊಲೀಸರ ಪ್ರಕಾರ, ಹರಿಯಾಣದ ಪಾಣಿಪತ್ ನಿವಾಸಿ ಅನುರಾಗ್ ಅಲಿಯಾಸ್ ರೆಹಾನ್ ಇಸ್ಲಾಂಗೆ ಮತಾಂತರಗೊಂಡಿದ್ದಾನೆ. ಆತನ ಪತ್ನಿ ಬಾಂಗ್ಲಾದೇಶಿ ಪ್ರಜೆ. ಇಬ್ಬರೂ ಹೆಚ್ಚು ತರಬೇತಿ ಪಡೆದವರು ಮತ್ತು ಭಾರತದಲ್ಲಿ ಐಸಿಸ್‌ನ ಸಕ್ರಿಯ ಸದಸ್ಯರು ಎಂದು ಅಸ್ಸಾಂನ ಎಸ್‌ಟಿಎಫ್ ಹೇಳಿದೆ.

ಅಸ್ಸಾಂ ಪೊಲೀಸ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಪ್ರಣಬ್ಜ್ಯೋತಿ ಗೋಸ್ವಾಮಿ, ಭಾರತದಲ್ಲಿ ಐಸಿಸ್‌ನ ಬೇರುಗಳನ್ನು ಸ್ಥಾಪಿಸುವುದು ಮತ್ತು ಅದನ್ನು ಹರಡುವುದು ಇಬ್ಬರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಐಎಸ್‌ಐಎಸ್‌ಗೆ ಯುವಕರನ್ನು ಸೇರಿಸಿಕೊಳ್ಳುವ ಸಂಚು, ಭಯೋತ್ಪಾದಕರಿಗೆ ಹಣ ನೀಡುವುದು ಮತ್ತು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮೂಲಕ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಂಚಿನಲ್ಲಿ ಫಾರೂಕಿ ಮತ್ತು ಅನುರಾಗ್ ಭಾಗಿಯಾಗಿದ್ದಾರೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ಇಬ್ಬರ ವಿರುದ್ಧವೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ದೆಹಲಿಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಲಕ್ನೋ ಪೊಲೀಸರಲ್ಲಿ ಹಲವಾರು ಪ್ರಕರಣಗಳು ಬಾಕಿ ಇವೆ. ಹೆಚ್ಚಿನ ತನಿಖೆಗಾಗಿ ಅಸ್ಸಾಂ ಪೊಲೀಸ್‌ನ ಎಸ್‌ಟಿಎಫ್ ಇಬ್ಬರೂ ಆರೋಪಿಗಳನ್ನು ಎನ್‌ಐಎಗೆ ಹಸ್ತಾಂತರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com