ಉತ್ತರ ಪ್ರದೇಶ: ಮಹಿಳೆಗೆ 3.5 ಕೋಟಿ ರೂ. ವಂಚನೆ, ಖಾಸಗಿ ಬ್ಯಾಂಕ್ ಮ್ಯಾನೇಜರ್, ಮತ್ತಿತರ ಐವರ ಬಂಧನ

ಮಹಿಳೆಯೊಬ್ಬರಿಗೆ 3.5 ಕೋಟಿ ರೂಪಾಯಿ ವಂಚಿಸಿದ ಖಾಸಗಿ ಬ್ಯಾಂಕ್ ನ ಮ್ಯಾನೇಜರ್, ಕ್ಯಾಷಿಯರ್ ಮತ್ತು ಇತರ ನಾಲ್ವರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕಿ ಶಂಪಾ ರಕ್ಷಿತ್ ವಂಚನೆಗೊಳಗಾದವರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾರಾಣಸಿ: ಮಹಿಳೆಯೊಬ್ಬರಿಗೆ 3.5 ಕೋಟಿ ರೂಪಾಯಿ ವಂಚಿಸಿದ ಖಾಸಗಿ ಬ್ಯಾಂಕ್ ನ ಮ್ಯಾನೇಜರ್, ಕ್ಯಾಷಿಯರ್ ಮತ್ತು ಇತರ ನಾಲ್ವರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕಿ ಶಂಪಾ ರಕ್ಷಿತ್ ವಂಚನೆಗೊಳಗಾದವರು.

ಮಾರ್ಚ್ 8 ರಂದು ಸಿಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ನಿವೃತ್ತ ಶಿಕ್ಷಕ ರಕ್ಷಿತ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದವನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಉದ್ಯೋಗಿಯಂತೆ ನಟಿಸಿದ್ದು, ರಕ್ಷಿತ್ ಅವರ ಮೊಬೈಲ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ನಂತರ ವಿಲೇಪಾರ್ಲೆ ಪೊಲೀಸ್ ಠಾಣೆಯ ಅಧಿಕಾರಿ ವಿನಯ್ ಚೌಬೆ ಎಂದು ಹೇಳಿಕೊಂಡು ರಕ್ಷಿತ್‌ಗೆ ಯಾರೋ ಕರೆ ಮಾಡಿದ್ದಾರೆ. ಬಳಿಕ ನೋಂದಾಯಿಸಲಾದ ಫೋನ್ ಸಂಖ್ಯೆಗೆ ಸಂಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ರಕ್ಷಿತ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಕರೆ ಮಾಡಿದವರು ಆ್ಯಪ್ ಡೌನ್‌ಲೋಡ್ ಮಾಡಲು ಮತ್ತು ಬಂಧನದ ಬೆದರಿಕೆಯೊಡ್ಡಿ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.

ಒತ್ತಾಯದ ಮೇರೆಗೆ ರಕ್ಷಿತ್ ಮಾರ್ಚ್ 11 ರಂದು ನಿಯೋಜಿತ RBI ಬ್ಯಾಂಕ್ ಖಾತೆಗೆ 3 ಕೋಟಿ ರೂ.ಗಳನ್ನು ಜಮಾ ಮಾಡಿದರು, ಮರುದಿನ ಹೆಚ್ಚುವರಿ 55 ಲಕ್ಷ ರೂ. ಜಮೆ ಮಾಡಿರುವುದಾಗಿ ಡಿಸಿಪಿ (ಅಪರಾಧ) ಚಂದ್ರಕಾಂತ್ ಮೀನಾ ಹೇಳಿದ್ದಾರೆ.

ಎಫ್‌ಐಆರ್ ದಾಖಲಾದ ನಂತರ, ಪೊಲೀಸ್ ಕಮಿಷನರ್ ಮೋಹಿತ್ ಅಗರವಾಲ್, ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ರಚಿಸುವಂತೆ ಡಿಸಿಪಿ (ಅಪರಾಧ) ಚಂದ್ರಕಾಂತ್ ಮೀನಾ ಅವರಿಗೆ ಸೂಚಿಸಿದರು.

ಕ್ರಿಮಿನಲ್ ಪಿತೂರಿ, ವಂಚನೆ, ಸುಲಿಗೆ, ಫೋರ್ಜರಿ ಮತ್ತು ಅಪ್ರಾಮಾಣಿಕವಾಗಿ ಕಳ್ಳತನದ ಆಸ್ತಿಯನ್ನು ಪಡೆದಿದ್ದಕ್ಕಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66D ಮತ್ತು 74 ರ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com