ಉತ್ತರ ಪ್ರದೇಶ: ಬಿಜೆಪಿಗೆ ಅಡ್ಡ ಮತದಾನ ಮಾಡಿದ ಎಸ್‌ಪಿಯ 4 ಶಾಸಕರಿಗೆ Y-ಕೆಟಗರಿ ಭದ್ರತೆ

ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆಯನ್ನು ನಿಗದಿಪಡಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ವೈ ಕೆಟಗರಿ ಭದ್ರತೆ ಪಡೆದ ಸಮಾಜವಾದಿ ಶಾಸಕರು
ವೈ ಕೆಟಗರಿ ಭದ್ರತೆ ಪಡೆದ ಸಮಾಜವಾದಿ ಶಾಸಕರು

ಲಖನೌ: ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆಯನ್ನು ನಿಗದಿಪಡಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಅಭಯ್ ಸಿಂಗ್ (ಗೋಸಾಯ್ ಗಂಜ್) ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಅವರಿಗೆ ವೈ-ಕೆಟಗರಿ ಭದ್ರತೆ ಕಲ್ಪಿಸಲಾಗಿದೆ.ಈ ನಾಲ್ವರು ಶಾಸಕರು, ಇತರ ಮೂರು ಪಕ್ಷದ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಅಶುತೋಷ್ ಮೌರ್ಯ ಅವರೊಂದಿಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಸಂಜಯ್ ಸೇಠ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಅಲೋಕ್ ರಂಜನ್ ಅವರನ್ನು ಸೋಲಿಸಿದರು.

ವೈ ಕೆಟಗರಿ ಭದ್ರತೆ ಪಡೆದ ಸಮಾಜವಾದಿ ಶಾಸಕರು
ಅಖಿಲೇಶ್ ಗೆ ಶಾಕ್: ಸಮಾಜವಾದಿ ಪಕ್ಷ ತೊರೆದ MLC ಸ್ವಾಮಿ ಪ್ರಸಾದ್ ಮೌರ್ಯ; ಹೊಸ ಪಕ್ಷ ಕಟ್ಟುತ್ತಾರಾ?

ವೈ-ಕೆಟಗರಿಯ ಭದ್ರತೆಯ ಭಾಗವಾಗಿ, ಎಂಟು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಈ ಶಾಸಕರಿಗೆ ಭದ್ರತೆ ನೀಡಲಿದ್ದಾರೆ. ಐವರು ಮನೆಗೆ ಭದ್ರತೆ ನೀಡಿದರೆ, ಉಳಿದ ಮೂವರು ಅವರೊಂದಿಗೆ ಸಂಚರಿಸಲಿದ್ದಾರೆ.

ಅಭಯ್ ಸಿಂಗ್ ಅವರಿಗೆ ಶುಕ್ರವಾರಯೇ ಭದ್ರತೆ ನೀಡಲಾಗಿದ್ದರೆ,, ಉಳಿದ ಮೂವರಿಗೆ ಶನಿವಾರದಿಂದ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com