
ಜೈಪುರ: ದೇಶಾದ್ಯಂತ ಲೋಕಸಭಾ ಚುನಾವಣೆ 2024 ರ ತಯಾರಿ ಭರ್ಜರಿಯಾಗಿ ನಡೆದಿದ್ದು, ಕಾಂಗ್ರೆಸ್ ಜೈಪುರದ ತನ್ನ ಅಭ್ಯರ್ಥಿಯನ್ನು ಏಕಾ ಏಕಿ ಬದಲಾವಣೆ ಮಾಡಿದೆ.
ಈ ಕ್ಷೇತ್ರದಿಂದ ರಾಜಸ್ಥಾನದ ಮಾಜಿ ಸಚಿವ ಪ್ರತಾಪ್ ಸಿಂಗ್ ಕಚಾರಿಯಾವಾಸ್ ಅವರನ್ನು ಕಣಕ್ಕೆ ಇಳಿಸಿದೆ. ಸುನಿಲ್ ಶರ್ಮಾ ಉಮೇದುವಾರಿಕೆಗೆ ಪಕ್ಷದ ಆಂತರಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.
ಸುನಿಲ್ ಶರ್ಮಾ ಅವರು ಜೈಪುರ ಡೈಲಾಗ್ (ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಬಗ್ಗೆ ಕಟು ಟೀಕೆ ಮಾಡುವ ವೇದಿಕೆ) ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರ ಹಿನ್ನೆಲೆಯಲ್ಲಿ ಅವರನ್ನು ಕಣದಿಂದ ಹಿಂದೆಸರಿಯುವಂತೆ ಮಾಡಲಾಗಿದೆ.
ಆದರೆ ಶರ್ಮಾ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿದ್ದು, ಈ ವೇದಿಕೆ ತಮ್ಮನ್ನು ಕಾಂಗ್ರೆಸ್ ನ ನಿಲುವುಗಳನ್ನು ಪ್ರಸ್ತುತಪಡಿಸಲು ಆಹ್ವಾನಿಸಿತ್ತು ಅಷ್ಟೇ ಎಂಬ ಸಮರ್ಥನೆ ನೀಡಿದ್ದಾರೆ. ಸ್ಥಳೀಯರ ವಿರೋಧದ ಪರಿಣಾಮ ಸುನಿಲ್ ಶರ್ಮಾ ಗೆ ಟಿಕೆಟ್ ಕೈತಪ್ಪಿದೆ.
Advertisement