'ಮಂಡಿ'ಯಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ನಾಯಕಿಯ ಅವಹೇಳನಕ್ಕೆ ಕಂಗನಾ ತಿರುಗೇಟು!

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಕೂಡಾ ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ?
ಕಂಗನಾ ರಣಾವತ್
ಕಂಗನಾ ರಣಾವತ್

ನವದೆಹಲಿ: ಕಂಗನಾ ರಣಾವತ್ ಬಗ್ಗೆ ದೇಶದಲ್ಲಿ ಪರ-ವಿರೋಧ ಅಭಿಪ್ರಾಯಗಳು ಇರುವುದು ಸಹಜ. ಸಿನಿಮಾಗಳಲ್ಲಿ ಅದ್ಭುತ ಅಭಿನಯದಿಂದ ಗಮನಸೆಳೆದಿರುವ ಕಂಗನಾ ರಣಾವತ್ ಅವರು ತಮ್ಮ ಬೋಲ್ಡ್ ಹೇಳಿಕೆಗಳಿಂದ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ, ಬಿಜೆಪಿ ಪಕ್ಷವನ್ನು ಹೊಗಳುತ್ತ ಬಂದಿದ್ದ ಕಂಗನಾಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಕೂಡಾ ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? ಎಂದು ಬರೆದಿದ್ದು, ಜನಾಕ್ರೋಶಕ್ಕೆ ಕಾರಣವಾಗಿತ್ತು, ಅದಾದ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಜನಾಕ್ರೋಶ ಕಂಡುಬರುತ್ತಿದ್ದಂತೆ ಶ್ರಿನೇಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಅಳಿಸಿದ್ದು ತನ್ನ ಮೆಟಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ತನ್ನ ಅಣಕ ಖಾತೆ ಮಾಡಿದ ಕಿಡಿಗೇಡಿತನ ಎಂದಿದ್ದಾರೆ.

ಕಂಗನಾ ರಣಾವತ್
ಲೋಕಸಭಾ ಚುನಾವಣೆ 2024: ಕಂಗನಾ ರಣೌತ್, ಕೋಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶಗೆ ಬಿಜೆಪಿ ಟಿಕೆಟ್

ತನ್ನ ಚಿತ್ರದೊಂದಿಗೆ ಅವಹೇಳನಾಕಾರಿ ಬರಹ ಪೋಸ್ಟ್ ಮಾಡಿದ ಸುಪ್ರಿಯಾಗೆ ಕಂಗನಾ ತಿರುಗೇಟು ನೀಡಿದ್ದಾರೆ ,ಡಿಯರ್ ಸುಪ್ರಿಯಾ ಜೀ, ಕಳೆದ 20 ವರ್ಷಗಳಿಂದ ನನ್ನ ಕರಿಯರ್‌ನಲ್ಲಿ ಕಲಾವಿದೆಯಾಗಿ ಎಲ್ಲ ರೀತಿಯ ಮಹಿಳೆಯ ಪಾತ್ರ ಮಾಡಿದ್ದೇನೆ. ಕ್ವೀನ್​​ನಲ್ಲಿನ ಮುಗ್ದ ಹುಡುಗಿಯಿಂದ ಹಿಡಿದು ಢಾಕಡ್‌ನಲ್ಲಿ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿನ ಪಿಶಾಚಿ ವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯ ಕ್ರಾಂತಿಕಾರಿ ನಾಯಕಿವರೆಗೆ.

ನಾವು ಪೂರ್ವಾಗ್ರಹಗಳ ಸಂಕೋಲೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಬೇಕು, ಅವರ ದೇಹದ ಅಂಗಗಳ ಬಗ್ಗೆ ಕುತೂಹಲ ಬಿಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಲೈಂಗಿಕ ಕೆಲಸಗಾರರನ್ನು ಜೀವನ ಅಥವಾ ಸಂದರ್ಭಗಳಿಗೆ ಸವಾಲು ಹಾಕುವುದನ್ನು ಕೆಲವು ರೀತಿಯ ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ತಡೆಯಬೇಕು. ಪ್ರತಿಯೊಬ್ಬ ಮಹಿಳೆಯೂ ಅವಳ ಘನತೆಗೆ ಅರ್ಹಳು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com