ವರುಣ್ ಗಾಂಧಿಗೆ ಕೈ ತಪ್ಪಿದ ಬಿಜೆಪಿ ಟಿಕೆಟ್, ಕಾಂಗ್ರೆಸ್ ಸೇರಲು ಆಹ್ವಾನ!

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಿಲಿಭಿತ್‌ನ ಹಾಲಿ ಸಂಸದ ವರುಣ್ ಗಾಂಧಿ ಅವರನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದ ನಂತರ, ಅವರು ಕಾಂಗ್ರೆಸ್ ಸೇರುವಂತೆ ಪಕ್ಷದ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ಆಹ್ವಾನ ನೀಡಿದ್ದಾರೆ.
ವರುಣ್ ಗಾಂಧಿ, ಅಧೀರ್ ರಂಜನ್ ಚೌಧರಿ
ವರುಣ್ ಗಾಂಧಿ, ಅಧೀರ್ ರಂಜನ್ ಚೌಧರಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಿಲಿಭಿತ್‌ನ ಹಾಲಿ ಸಂಸದ ವರುಣ್ ಗಾಂಧಿ ಅವರನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದ ನಂತರ, ಅವರು ಕಾಂಗ್ರೆಸ್ ಸೇರುವಂತೆ ಪಕ್ಷದ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ಆಹ್ವಾನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ಗಾಂಧಿ ಕುಟುಂಬದೊಂದಿಗಿನ ಸಂಪರ್ಕದಿಂದಾಗಿ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. "ಅವರು ಕಾಂಗ್ರೆಸ್ ಗೆ ಬರಬೇಕು, ನಾವು ಸಂತೋಷವಾಗಿರುತ್ತೇವೆ. ಅವರು ವಿದ್ಯಾವಂತ ವ್ಯಕ್ತಿ. ಅವರು ಕ್ಲೀನ್ ಇಮೇಜ್ ಹೊಂದಿದ್ದಾರೆ.ಅವರು ಕಾಂಗ್ರೆಸ್ ಗೆ ಬರಬೇಕು ಎಂದರು.

ವರುಣ್ ಗಾಂಧಿ, ಅಧೀರ್ ರಂಜನ್ ಚೌಧರಿ
ಬಿಜೆಪಿಯೊಂದಿಗೆ ಭ್ರಮ ನಿರಶನ: ಕಮಲ ತೊರೆಯಲು ಚಿಂತನೆ; ಕಾಂಗ್ರೆಸ್, ಟಿಎಂಸಿ, ಎಎಪಿಯತ್ತ ವರುಣ್ ಗಾಂಧಿ ಚಿತ್ತ!

ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದು, ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿ ಅವರನ್ನು ಕೈಬಿಟ್ಟಿದೆ ಮತ್ತು ಸುಲ್ತಾನ್‌ಪುರದಿಂದ ಅವರ ತಾಯಿ ಮೇನಕಾ ಗಾಂಧಿಗೆ ಟಿಕೆಟ್ ಘೋಷಿಸಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ ಅವರನ್ನು ಪಿಲಿಭಿತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ನೀಡಲಾಗಿದೆ.

ವರುಣ್ ಗಾಂಧಿ 2009 ರಲ್ಲಿ ತಮ್ಮ ಚೊಚ್ಚಲ ಸ್ಪರ್ಧೆಯಲ್ಲಿ 4.19 ಲಕ್ಷ ಮತಗಳೊಂದಿಗೆ ನಿರ್ಣಾಯಕವಾಗಿ ಪಿಲಿಭಿತ್ ಕ್ಷೇತ್ರದಲ್ಲಿ ಗೆದಿದ್ದರು. 2014 ಮತ್ತು 2019 ರಲ್ಲಿ ಅವರ ನಂತರದ ಗೆಲುವುಗಳು ಕುಟುಂಬದ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಭದ್ರಪಡಿಸಿದವು.

ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ಮತ್ತು ರಾಹುಲ್ ಗಾಂಧಿ ಅವರ ಪ್ರಮುಖ ಸಹಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಪ್ರಸಾದ ಅವರು 2014 ಮತ್ತು 2019 ರಲ್ಲಿ ಎರಡು ಲೋಕಸಭಾ ಚುನಾವಣೆಗಳಲ್ಲಿ ಸೋತಿದ್ದರು ಮತ್ತು 2021 ರಲ್ಲಿ ಯುಪಿ ಶಾಸಕಾಂಗ ಮಂಡಳಿಗೆ ಆಯ್ಕೆಯಾಗಿದ್ದರು. ಸಂಸತ್ತಿಗೆ ಗರಿಷ್ಠ ಸಂಖ್ಯೆಯ 80 ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶವು ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com