ceiling collapseonline desk
ದೇಶ
ಚೆನ್ನೈ ನ ಅಳ್ವಾರ್ ಪೇಟ್ ನಲ್ಲಿ ಸೆಖ್ಮೆಟ್ ಕ್ಲಬ್ ನಲ್ಲಿ ಮೇಲ್ಛಾವಣಿ ಕುಸಿತ; 3 ಸಾವು!
ಚೆನ್ನೈ ನ ಆಳ್ವಾರ್ ಪೇಟ್ ನಲ್ಲಿ ಸೆಖ್ಮೆಟ್ ಕ್ಲಬ್ ನಲ್ಲಿ ಮೇಲ್ಛಾವಣಿ ಕುಸಿತಗೊಂಡ ಪರಿಣಾಮ 3 ಸಾವನ್ನಪ್ಪಿದ್ದಾರೆ.
ಚೆನ್ನೈ: ಚೆನ್ನೈ ನ ಆಳ್ವಾರ್ ಪೇಟ್ ನಲ್ಲಿ ಸೆಖ್ಮೆಟ್ ಕ್ಲಬ್ ನಲ್ಲಿ ಮೇಲ್ಛಾವಣಿ ಕುಸಿತಗೊಂಡ ಪರಿಣಾಮ 3 ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ್ದ ಮ್ಯಾಕ್ಸ್ (22) ಹಾಗೂ ಲಲ್ಲಿ (24) ಹಾಗೂ ಸೈಕ್ಲೋನ್ ರಾಜ್ (48) ಸಾವನ್ನಪ್ಪಿದ್ದಾರೆ.
ಘಟನೆ ನಡೆದಾಗ ಸ್ಥಳದಲ್ಲಿ ಪಬ್ ನಲ್ಲಿ 20 ಮಂದಿ ಇದ್ದರು. ಸೇಖ್ಮೆಟ್ ಅತ್ಯಂತ ಜನಪ್ರಿಯ ಬಾರ್ ಆಗಿದೆ.
ಪೊಲೀಸರ ಪ್ರಕಾರ, ಆರಂಭದಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದರೆ, ಇನ್ನೆರಡು ನಂತರ ಪತ್ತೆಯಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳೆರಡೂ ಸ್ಥಳದಲ್ಲಿದ್ದು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ