'ಒಟ್ಟಾಗಿ ಹೋರಾಡೋಣ': ಕಲ್ಪನಾ ಸೊರೆನ್, ಸುನಿತಾ ಕೇಜ್ರಿವಾಲ್ ಭೇಟಿ, ಒಗ್ಗೂಡಿ ಹೋರಾಟದ ಪ್ರತಿಜ್ಞೆ!

ವಿವಿಧ ಪ್ರಕರಣಗಳಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲುಪಾಲಾಗಿರುವಂತೆಯೇ ಇತ್ತ ಉಭಯ ನಾಯಕರ ಪತ್ನಿಯರು ಪರಸ್ಪರ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
ಕಲ್ಪನಾ ಸೊರೆನ್, ಸುನಿತಾ ಕೇಜ್ರಿವಾಲ್ ಭೇಟಿ
ಕಲ್ಪನಾ ಸೊರೆನ್, ಸುನಿತಾ ಕೇಜ್ರಿವಾಲ್ ಭೇಟಿ

ನವದೆಹಲಿ: ವಿವಿಧ ಪ್ರಕರಣಗಳಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲುಪಾಲಾಗಿರುವಂತೆಯೇ ಇತ್ತ ಉಭಯ ನಾಯಕರ ಪತ್ನಿಯರು ಪರಸ್ಪರ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.

ಕೇಜ್ರಿವಾಲ್​ ಅವರ ಪತ್ನಿ ಸುನೀತಾ ಕೇಜ್ರಿವಾಲ್​ ಅವರ ದೆಹಲಿ ನಿವಾಸಕ್ಕೆ ಸೊರೆನ್​ ಅವರ ಪತ್ನಿ ಕಲ್ಪನಾ ಸೊರೆನ್​ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಅವರು ಶನಿವಾರ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಒಗ್ಗೂಡಿ ಹೋರಾಟ ಮಾಡುವ ಪರಸ್ಪರ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಕಲ್ಪನಾ ಸೊರೆನ್, ಸುನಿತಾ ಕೇಜ್ರಿವಾಲ್ ಭೇಟಿ
ನವದೆಹಲಿ: ಕೇಜ್ರಿವಾಲ್ ಬದಲಾಗಿ ಪತ್ನಿ ಸುನೀತಾ ಸಿಎಂ ಸ್ಥಾನಕ್ಕೆ? ಹೀಗೊಂದು ವದಂತಿ!

ಒಟ್ಟಾಗಿ ಹೋರಾಟ

ಭೇಟಿ ಬಳಿಕ ಮಾತನಾಡಿದ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೆನ್​, ಎರಡು ತಿಂಗಳ ಹಿಂದೆ ಜಾರ್ಖಂಡ್‌ನಲ್ಲಿ ನಡೆದದ್ದೇ ಈಗ ದೆಹಲಿಯಲ್ಲಿ ನಡೆಯುತ್ತಿದೆ. ಸುನೀತಾ ಅವರ ದುಃಖ ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ನಾವು ಒಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ. ಇಡೀ ಜಾರ್ಖಂಡ್ ಅರವಿಂದ್ ಕೇಜ್ರಿವಾಲ್ ಅವರ ಜೊತೆಗಿದೆ. ನಾನು ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಸಹ ಭೇಟಿ ಮಾಡುತ್ತೇನೆ ಎಂದು ಕಲ್ಪನಾ ಹೇಳಿದರು.

ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಬಂಧನದ ನಂತರ ಭಾನುವಾರ ನಡೆಯಲಿರುವ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಬ್ಲಾಕ್ ನಾಯಕರ ರ್ಯಾಲಿಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರೊಂದಿಗೆ ಕಲ್ಪನಾ ಸೊರೆನ್ ಭಾಗವಹಿಸಲಿದ್ದಾರೆ. ಸುನೀತಾ ಕೇಜ್ರಿವಾಲ್ ಕೂಡ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ.

ಈಗ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com