ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ, ಅಲ್ಲಿ ಪಾಕಿಸ್ತಾನ ರಾಹುಲ್ ಪ್ರಧಾನಿಯಾಗಲಿ ಎಂದು ಅಳುತ್ತಾ ಪ್ರಾರ್ಥಿಸುತ್ತಿದೆ: ಪ್ರಧಾನಿ ಮೋದಿ

ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಅಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಗುಜರಾತ್: ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಅಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್ ನ ಆನಂದ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಜತೆಗೆ ಕಾಂಗ್ರೆಸ್​ ಹಾಗೂ ಪಾಕಿಸ್ತಾನದ ಸಹಭಾಗಿತ್ವವನ್ನು ಬಹಿರಂಗಪಡಿಸಿದ್ದಾರೆ.

ರಾಹುಲ್‌ ಗಾಂಧಿ ಭಾಷಣವನ್ನು ಪಾಕಿಸ್ತಾನದ ಇಮ್ರಾನ್ ಖಾನ್ ಸಂಪುಟದಲ್ಲಿ ಮಂತ್ರಿಯಾಗಿದ್ದ ಮಾಜಿ ಸಚಿವ ಫವಾದ್‌ ಹುಸೇನ್‌ ಮೆಚ್ಚಿಕೊಂಡಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಮಧ್ಯೆ ಎಷ್ಟೊಂದು ಸ್ನೇಹ ಸಂಬಂಧ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿರುಗೇಟು ಕೊಟ್ಟರು. ಕಾಂಗ್ರೆಸ್‌ ಇಲ್ಲಿ ದುರ್ಬಲಗೊಳ್ಳುತ್ತಿದ್ದರೆ ಅಲ್ಲಿ ಪಾಕಿಸ್ತಾನ ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕೆಂದು ಅಳುತ್ತಾ ಪ್ರಾರ್ಥಿಸುತ್ತಿದೆ. ಹೇಗಾದರೂ ಸರಿ ಯುವರಾಜನೇ(ರಾಹುಲ್‌ ಗಾಂಧಿ) ಭಾರತದ ಪ್ರಧಾನಿ ಆದರೆ ಸಾಕೆಂದು ಪಾಕಿಸ್ತಾನ ಬಯಸುತ್ತಿದೆ. ಕಾಂಗ್ರೆಸ್‌ ಮತ್ತು ಪಾಕಿಸ್ತಾನದ ನಡುವಿನ ಸ್ನೇಹ ಸಂಬಂಧ ಈಗಾಗಲೇ ಬಯಲಾಗಿದೆ ಎಂದಿದ್ದಾರೆ.

ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಭಾರತದಲ್ಲಿ ದುರ್ಬಲ ಸರ್ಕಾರ ಇರಬೇಕು. ಈ ಹಿಂದೆ ಇದ್ದ ದುರ್ಬಲ ಸರ್ಕಾರದ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಮುಂಬೈ ಭಯೋತ್ಪಾದಕಾ ದಾಳಿ ನಡೆಸಲು ಸಾಧ್ಯವಾಗಿತ್ತು.

ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಪಾಕಿಸ್ತಾನದ ಬೆಂಬಲಿಗನಂತೆ ವರ್ತಿಸುತ್ತಿದೆ. ಹೀಗಾಗಿಯೇ ಇಲ್ಲಿ ಕಾಂಗ್ರೆಸ್‌ ಅಧಃಪತನ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಕಣ್ಣೀರುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇವತ್ತು ನಾನು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುತ್ತೇವೆ ಎಂಬ ಗ್ಯಾರಂಟಿಯನ್ನು ಕೊಡುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ನರೇಂದ್ರ ಮೋದಿ
ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋಲ್ವಾ? ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ?

60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನು ದೇಶ ಕಂಡಿದೆ. ಈಗ ದೇಶ ಬಿಜೆಪಿಯ 10 ವರ್ಷಗಳ ಸೇವಾ ಅವಧಿಯನ್ನೂ ಕಂಡಿದೆ. ಅದು ಆಳ್ವಿಕೆ, ಇದು ಸೇವಾ ಅವಧಿ ಎಂದರು. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಶೇ.60ರಷ್ಟು ಗ್ರಾಮೀಣ ಜನತೆಗೆ ಶೌಚಾಲಯ ಇರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಶೇ 100ರಷ್ಟು ಶೌಚಾಲಯ ನಿರ್ಮಿಸಿದೆ. 60 ವರ್ಷಗಳಲ್ಲಿ ಕಾಂಗ್ರೆಸ್ ದೇಶದ 3 ಕೋಟಿ ಗ್ರಾಮೀಣ ಮನೆಗಳಿಗೆ ಅಂದರೆ ಶೇ.20ಕ್ಕಿಂತ ಕಡಿಮೆ ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು. ಕೇವಲ 10 ವರ್ಷಗಳಲ್ಲಿ, ನಲ್ಲಿ ನೀರು ಸರಬರಾಜು ಮಾಡುವ ಮನೆಗಳ ಸಂಖ್ಯೆ 14 ಕೋಟಿಗೆ ತಲುಪಿದೆ, ಅಂದರೆ, 75% ಮನೆಗಳಿಗೆ ನಲ್ಲಿ ನೀರು ಸರಬರಾಜು ಒದಗಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com