ಲಡಾಖ್ ನ ಬಿಜೆಪಿ ಹಾಲಿ ಸಂಸದ ತ್ಸೆರಿಂಗ್ ನಮ್ಗ್ಯಾಲ್ ಗೆ ಕಾಂಗ್ರೆಸ್ ಟಿಕೆಟ್!

ಲಡಾಖ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ತ್ಸೆರಿಂಗ್ ನಮ್ಗ್ಯಾಲ್ ಗೆ ಪಕ್ಷದಿಂದ ಟಿಕೆಟ್ ಕೈತಪ್ಪಿದ್ದು ಹೊಸ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿದೆ.
ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್
ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್

ಲಡಾಖ್: ಲಡಾಖ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ತ್ಸೆರಿಂಗ್ ನಮ್ಗ್ಯಾಲ್ ಗೆ ಪಕ್ಷದಿಂದ ಟಿಕೆಟ್ ಕೈತಪ್ಪಿದ್ದು ಹೊಸ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿದೆ.

ಬಿಜೆಪಿ ಹಾಲಿ ಸಂಸದನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಏರ್ಪಡಲಿದೆ.

ಕಾಂಗ್ರೆಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಕೇಂದ್ರ ಚುನಾವಣಾ ಸಮಿತಿ ತ್ಸೆರಿಂಗ್ ನಮ್ಗ್ಯಾಲ್ ಅವರನ್ನು ಲಡಾಖ್ ನಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವುದಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದೆ.

ಇದಕ್ಕೂ ಮೊದಲು ಬಿಜೆಪಿ ಏ.23 ರಂದು ಲಡಾಖ್ ನಿಂದ ತಾಶಿ ಗ್ಯಾಲ್ಸನ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ತಾಶಿ ಗ್ಯಾಲ್ಸನ್ ಅವರು ಲಿಂಗ್‌ಶೆಡ್ ಕ್ಷೇತ್ರದ ಕೌನ್ಸಿಲರ್ ಆಗಿದ್ದಾರೆ ಮತ್ತು 2020 ರಲ್ಲಿ 6 ನೇ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್, (LAHDC), ಲೇಹ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು.

ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್
ಲಡಾಖ್ ವಿಷಯವಾಗಿ ಉಪವಾಸ ಮುಷ್ಕರ ಕೈಬಿಟ್ಟ ಸೋನಮ್ ವಾಂಗ್ ಚುಕ್

2019 ರ ಚುನಾವಣೆಯಲ್ಲಿ, ಬಿಜೆಪಿ ಪಕ್ಷದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಲಡಾಖ್‌ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದರು, 42,914 ಮತಗಳು ಮತ್ತು 33.9 ಶೇಕಡಾ ಮತಗಳೊಂದಿಗೆ ಗಮನಾರ್ಹ ಜನಾದೇಶವನ್ನು ಪಡೆದರು. ಸಜ್ಜದ್ ಹುಸೇನ್ ಸ್ವತಂತ್ರ ಅಭ್ಯರ್ಥಿ 31,984 ಮತಗಳನ್ನು ಗಳಿಸಿದ್ದರು. ಲಡಾಖ್ ನಲ್ಲಿ ಮೇ.20 ರಂದು ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com