LokSabha Election 2024: 25 ವರ್ಷಗಳಲ್ಲಿ ಇದೇ ಮೊದಲು; ಅಮೇಥಿಯಲ್ಲಿ ಗಾಂಧಿ ಕುಟುಂಬದ ಸದಸ್ಯರಲ್ಲದವರ ಸ್ಪರ್ಧೆ!

ಹಾಲಿ ಲೋಕಸಭಾ ಚುನಾವಣೆ 2024 ಹಲವು ಗಮನಾರ್ಹ ಅಂಶಗಳಿಗೆ ಸುದ್ದಿಯಾಗುತ್ತಿದ್ದು, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈ ಬಾರಿ ರಾಯ್ ಬರೇಲಿಯಿಂದ ಸ್ಪರ್ಧೆ ಮಾಡುವ ಮೂಲಕ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೇಥಿಯಲ್ಲಿ ಗಾಂಧಿ ಕುಟುಂಬದ ಸದಸ್ಯರಲ್ಲದವರು ಸ್ಪರ್ಧೆ ಮಾಡುವಂತಾಗಿದೆ.
1st time in 25 years no Gandhi from Amethi
ಕಾಂಗ್ರೆಸ್ ಅಭ್ಯರ್ಥಿ ಕೆಎಲ್ ಶರ್ಮಾ ಮತ್ತು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ
Updated on

ನವದೆಹಲಿ: ಹಾಲಿ ಲೋಕಸಭಾ ಚುನಾವಣೆ 2024 ಹಲವು ಗಮನಾರ್ಹ ಅಂಶಗಳಿಗೆ ಸುದ್ದಿಯಾಗುತ್ತಿದ್ದು, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈ ಬಾರಿ ರಾಯ್ ಬರೇಲಿಯಿಂದ ಸ್ಪರ್ಧೆ ಮಾಡುವ ಮೂಲಕ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೇಥಿಯಲ್ಲಿ ಗಾಂಧಿ ಕುಟುಂಬದ ಸದಸ್ಯರಲ್ಲದವರು ಸ್ಪರ್ಧೆ ಮಾಡುವಂತಾಗಿದೆ.

ಹೌದು.. ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳಾಗಿದ್ದವು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ದ ಸೋತಿದ್ದರು. ಆದರೆ ವಯನಾಡು ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ದ ರಾಹುಲ್ ಗಾಂಧಿ ಅಲ್ಲಿ ಜಯ ಗಳಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

1st time in 25 years no Gandhi from Amethi
LokSabha Election 2024: ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ; ಸೋನಿಯಾ, ಖರ್ಗೆ ಉಪಸ್ಥಿತಿ!

ಈ ಬಾರಿಯೂ ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದ ರಾಜಕೀಯ ಲೆಕ್ಕಾಚಾರಗಳು ರಾಹುಲ್ ಗಾಂಧಿ ಪರವಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ಅಮೇಥಿಯಿಂದ ಕೈ ಬಿಟ್ಟು, ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಆ ಮೂಲಕ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರಲ್ಲದವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಅಮೇಥಿಯಲ್ಲಿ ಯಾರು ಸ್ಪರ್ಧೆ?

ಇನ್ನು ಈ ಬಾರಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಅವರನ್ನು ಅಮೇಠಿಯಿಂದ ಕಾಂಗ್ರೆಸ್ ಉಮೇದುವಾರನನ್ನಾಗಿ ಮಾಡಿದೆ.

ಅಮೇಥಿ ಇತಿಹಾಸ

1967ರಲ್ಲಿ ಈ ಕ್ಷೇತ್ರ ರಚನೆಯಾಯಿತು. ಗಾಂಧಿ ಕುಟುಂಬದ ಸಂಜಯ್‌ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಸಂಸದರಾಗಿದ್ದರು. 1967, 1971ರಲ್ಲಿ ಕಾಂಗ್ರೆಸ್‌ ವಿದ್ಯಧರ ಭಾಜ್‌ಪೈ ಸಂಸದರಾಗಿದ್ದರು. 1977ರಲ್ಲಿ ಜನತಾ ಪಕ್ಷದ ರವೀಂದ್ರ ಪ್ರತಾಪ್ ಸಿಂಗ್‌ ಅವರು ಸಂಜಯ್‌ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1980ರ ಸಾರ್ವತ್ರಿ ಚುನಾವಣೆ‌ಯಲ್ಲಿ ಸಂಜಯ್‌ ಗಾಂಧಿ ಅವರು ರವೀಂದ್ರ ಪ್ರತಾಪ್ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು.

ಸಂಜಯ್ ಗಾಂಧಿ ಅವರ ಅಕಾಲಿಕ ಮರಣದ ನಂತರ 1981ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜೀವ್‌ ಗಾಂಧಿ ಸ್ಪರ್ಧಿಸಿ 2 ಲಕ್ಷ ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. 1991ರಲ್ಲಿ ಎಲ್‌ಟಿಟಿಇ ಉಗ್ರರ ಗುಂಡಿಗೆ ಬಲಿಯಾಗುವವರೆಗೂ ಅವರು ಈ ಕ್ಷೇತ್ರದ ಸಂಸದರಾಗಿದ್ದರು. ಬಳಿಕ ರಾಜೀವ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅಪ್ತ ಸತೀಶ್ ಶರ್ಮಾ ಇಲ್ಲಿಂದ ಸಂಸದರಾಗಿದ್ದರು. 1996ರಲ್ಲೂ ಗೆದ್ದರು. 1998ರಲ್ಲಿ ಬಿಜೆಪಿಯ ಸಂಜಯ್ ಸಿನ್ಹಾ ವಿರುದ್ಧ ಸೋತಿದ್ದರು.

1st time in 25 years no Gandhi from Amethi
ದೆಹಲಿಯಲ್ಲಿ ಹಗ್ಗಿಂಗ್, ಕೇರಳದಲ್ಲಿ ಬೆಗ್ಗಿಂಗ್, ಕರ್ನಾಟಕದಲ್ಲಿ ಥಗ್ಗಿಂಗ್: I.N.D.I.A ಬ್ಲಾಕ್‌ ವಿರುದ್ಧ ಸ್ಮೃತಿ ಇರಾನಿ ವ್ಯಂಗ್ಯ!

1999ರಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2004ರಲ್ಲಿ ಅಮೇಠಿ ಬಿಟ್ಟು ಪಕ್ಕದ ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿದರು. 2004ರಿಂದ 2019ರವರೆಗೆ ರಾಹುಲ್ ಗಾಂಧಿ ಈ ಕ್ಷೇತ್ರದ ಸಂಸದರಾಗಿದ್ದರು. 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com