ಚುನಾವಣಾ ಕಣದಿಂದ ಓಡಿಹೋಗುವವರು ದೇಶ ಮುನ್ನಡೆಸಲು ಬಯಸುತ್ತಾರೆ: ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

ಅಮೇಥಿಯಿಂದ ರಾಯ್ ಬರೇಲಿಗೆ ಲೋಕಸಭಾ ಕ್ಷೇತ್ರವನ್ನು ಬದಲಾಯಿಸಿದ್ದಕ್ಕಾಗಿ ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಚುನಾವಣಾ ಕಣದಿಂದ ಓಡಿ ಹೋಗುವ ವ್ಯಕ್ತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ, ರಾಜನಾಥ್ ಸಿಂಗ್
ರಾಹುಲ್ ಗಾಂಧಿ, ರಾಜನಾಥ್ ಸಿಂಗ್
Updated on

ರೋಹ್ಟಕ್: ಅಮೇಥಿಯಿಂದ ರಾಯ್ ಬರೇಲಿಗೆ ಲೋಕಸಭಾ ಕ್ಷೇತ್ರವನ್ನು ಬದಲಾಯಿಸಿದ್ದಕ್ಕಾಗಿ ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಚುನಾವಣಾ ಕಣದಿಂದ ಓಡಿ ಹೋಗುವ ವ್ಯಕ್ತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ.

ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಅಮೇಥಿಯಿಂದ ಸ್ಪರ್ಧಿಸುವ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಅವರು ದೇಶ ಮುನ್ನಡೆಸಬೇಕು ಎಂದು ಜನರು ಬಯಸಿದ್ದರು. ಅನೇಕ ಕಾಂಗ್ರೆಸ್ ನಾಯಕರು ಕೂಡಾ ಅವರು ಅಮೇಥಿಯಿಂದಲೇ ಸ್ಪರ್ಧಿಸಲಿ ಅಂದುಕೊಂಡಿದ್ದರು. ಆದರೆ, ಅವರು ಹೆದರಿ ಓಡಿ ಹೋಗಿದ್ದಾರೆ ಎಂದು ಟೀಕಿಸಿದರು. ಚುನಾವಣಾ ಕಣದಿಂದ ಓಡಿ ಹೋಗಿದ ಅವರಿಗೆ ಬೇರೆ ಹೆಸರು ಇಡಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ರಾಹುಲ್ ಗಾಂಧಿ, ರಾಜನಾಥ್ ಸಿಂಗ್
LokSabha Election 2024: 25 ವರ್ಷಗಳಲ್ಲಿ ಇದೇ ಮೊದಲು; ಅಮೇಥಿಯಲ್ಲಿ ಗಾಂಧಿ ಕುಟುಂಬದ ಸದಸ್ಯರಲ್ಲದವರ ಸ್ಪರ್ಧೆ!

ಲೋಕಸಭೆಯಲ್ಲಿ ಮೂರು ಅವಧಿಗೆ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಿದ ರಾಹುಲ್ ಗಾಂಧಿ 2019 ರಲ್ಲಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಆದರೆ ಅವರು ಕೇರಳದ ವಯನಾಡಿನಲ್ಲಿ ಗೆದ್ದಿದ್ದರು. ಪಾಕಿಸ್ತಾನದ ನಾಯಕ ಚೌಧರಿ ಫವಾದ್ ಹುಸೇನ್, ರಾಹುಲ್ ಗಾಂಧಿಯನ್ನು ಹೊಗಳಿದ್ದಕ್ಕಾಗಿ ಸಿಂಗ್ ಅವರು ಕಾಂಗ್ರೆಸ್ ಅನ್ನು ಟೀಕಿಸಿದರು. ಹುಸೇನ್ ಈ ಹಿಂದೆ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com