ವಿದೇಶಾಂಕ ಸಚಿವ ಎಸ್ ಜೈಶಂಕರ್PTI
ದೇಶ
ಬೈಡನ್ ಕ್ಸೆನೋಫೋಬಿಕ್ ಹೇಳಿಕೆಗೆ ವಿದೇಶಾಂಗ ಸಚಿವ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ
ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭಾರತವನ್ನು ಕ್ಸೆನೋಫೋಬಿಕ್ ಎಂದು ಹೇಳಿದ್ದಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ: ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭಾರತವನ್ನು ಕ್ಸೆನೋಫೋಬಿಕ್ ಎಂದು ಹೇಳಿದ್ದಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಸಮಾಜ ಅನ್ಯ ಸಮಾಜಗಳ ಜನರಿಗೆ ಎಂದಿಗೂ ಮುಕ್ತವಾಗಿದೆ ಎಂದು ಜೈ ಶಂಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಿಸಿಎ ಸಮಸ್ಯೆಯಲ್ಲಿ ಸಿಲುಕಿರುವ ಎಲ್ಲಾ ಮಂದಿಗೂ ಬಾಗಿಲು ತೆರೆದಿದೆ ಎಂದು ಜೈಶಂಕರ್ ಹೇಳಿದ್ದಾರೆ.
"ಅದಕ್ಕಾಗಿಯೇ ನಾವು ಸಿಎಎ (ಪೌರತ್ವ ತಿದ್ದುಪಡಿ ಕಾಯಿದೆ) ನ್ನು ಹೊಂದಿದ್ದೇವೆ, ಅದು ತೊಂದರೆಯಲ್ಲಿರುವ ಜನರಿಗೆ ಬಾಗಿಲು ತೆರೆಯುತ್ತದೆ. ಭಾರತಕ್ಕೆ ಬರುವ ಅಗತ್ಯವಿರುವವರಿಗೆ, ಹಕ್ಕು ಹೊಂದಿರುವ ಜನರಿಗೆ ನಾವು ಮುಕ್ತವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಭಾರತಕ್ಕೆ ಬನ್ನಿ" ಎಂದು ಅವರು ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಚುನಾವಣಾ ಭಾಷಣದಲ್ಲಿ ಮಾತನಾಡಿದ್ದ ಬೈಡನ್, ರಷ್ಯಾ, ಚೀನಾ, ಜಪಾನ್, ಭಾರತ ದೇಶಗಳು ವಲಸಿಗರನ್ನು ಸ್ವಾಗತಿಸುವುದಿಲ್ಲ ಎಂದು ಹೇಳಿದ್ದರು.


