ಭಾರತವನ್ನು ಕ್ಸೆನೋಫೋಬಿಕ್ ಎಂದು ಅಮೇರಿಕಾ ಅಧ್ಯಕ್ಷ ಬೈಡನ್ ಹೇಳಿದ್ದೇಕೆ?

ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಕ್ವಾಡ್ ನ ಪಾಲುದಾರ ದೇಶಗಳಾದ ಭಾರತ, ಜಪಾನ್ ಹಾಗೂ ಅಮೇರಿಕಾದೊಂದಿಗೆ ಸ್ಪರ್ಧೆಗಿಳಿದಿರುವ ದೇಶಗಳಾಗಿರುವ ರಷ್ಯಾ ಹಾಗೂ ಚೀನಾ ದೇಶಗಳನ್ನು ಕ್ಸೆನೋಫೋಬಿಕ್ ಎಂದು ಹೇಳಿದ್ದಾರೆ.
ಮೋದಿ-ಬೈಡನ್
ಮೋದಿ-ಬೈಡನ್online desk

ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಕ್ವಾಡ್ ನ ಪಾಲುದಾರ ದೇಶಗಳಾದ ಭಾರತ, ಜಪಾನ್ ಹಾಗೂ ಅಮೇರಿಕಾದೊಂದಿಗೆ ಸ್ಪರ್ಧೆಗಿಳಿದಿರುವ ದೇಶಗಳಾಗಿರುವ ರಷ್ಯಾ ಹಾಗೂ ಚೀನಾ ದೇಶಗಳನ್ನು ಕ್ಸೆನೋಫೋಬಿಕ್ ಎಂದು ಹೇಳಿದ್ದಾರೆ.

ವಿದೇಶಿಯರ ಬಗ್ಗೆ ಭಯ ಹೊಂದಿರುವುದನ್ನು ಕ್ಸೆನೋಫೋಬಿಯಾ ಎನ್ನುತ್ತಾರೆ. ರಷ್ಯಾ, ಚೀನಾ, ಜಪಾನ್, ಭಾರತ ದೇಶಗಳು ವಲಸಿಗರನ್ನು ಸ್ವಾಗತಿಸುವುದಿಲ್ಲ ಎಂದು ಬೈಡನ್ ತಮ್ಮ ದೇಶದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದಾರೆ.

ಅಮೇರಿಕಾದ ಈ ಚುನಾವಣೆ ಸ್ವಾತಂತ್ರ್ಯ, ಅಮೇರಿಕಾ ಹಾಗೂ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ್ದಾಗಿದೆ. ಅದಕ್ಕಾಗಿಯೇ ನನಗೆ ನಿಮ್ಮ ಅಗತ್ಯವಿದೆ. ನಮ್ಮ ಆರ್ಥಿಕತೆ ಏಕೆ ಬೆಳೆಯುತ್ತಿದೆ ಎಂಬುದಕ್ಕೆ ನೀವು ಹಾಗೂ ಇನ್ನೂ ಇತರರು ಕಾರಣರಾಗಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಏಕೆಂದರೆ ನಾವು ವಲಸಿಗರನ್ನು ಸ್ವಾಗತಿಸುತ್ತೇವೆ ಎಂದು ತಮ್ಮ ಬೆಂಬಲಿಗರಿಗೆ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಬೈಡನ್ ಹೇಳಿದ್ದಾರೆ.

ಮೋದಿ-ಬೈಡನ್
ಗಾಜಾದಲ್ಲಿ ಸಹಾಯ ಕಾರ್ಯಕರ್ತರ ಹತ್ಯೆ: ಬೈಡನ್, ಸುನಕ್ ಆಕ್ಷೇಪದ ಬೆನ್ನಲ್ಲೇ IDF ಕ್ಷಮೆ ಯಾಚನೆ!

ಚೀನಾ, ರಷ್ಯಾ, ಜಪಾನ್, ಭಾರತಗಳೇಕೆ ಆರ್ಥಿಕವಾಗಿ ಅಡೆತಡೆಗಳನ್ನು ಎದುರಿಸುತ್ತಿವೆ ಎಂದರೆ, ಅವು ಕ್ಸೆನೋಫೋಬಿಕ್ ಆಗಿವೆ, ಅವರಿಗೆ ವಲಸಿಗರು ಬೇಕಿಲ್ಲ ಎಂದು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬೈಡನ್ ಹೇಳಿದ್ದಾರೆ.

"ವಲಸಿಗರು ನಮ್ಮನ್ನು ಬಲಪಡಿಸುತ್ತಾರೆ. ತಮಾಷೆ ಅಲ್ಲ. ಇದು ಅತಿಶಯೋಕ್ತಿಯಲ್ಲ, ಏಕೆಂದರೆ ನಾವು ಇಲ್ಲಿರಲು ಬಯಸುವ ಮತ್ತು ಕೊಡುಗೆ ನೀಡಲು ಬಯಸುವ ಕಾರ್ಮಿಕರ ಒಳಹರಿವನ್ನು ಹೊಂದಿದ್ದೇವೆ" ಎಂದು ಡೆಮಾಕ್ರಟಿಕ್ ಪಕ್ಷದ ನಿಧಿಸಂಗ್ರಹಣೆಯಲ್ಲಿ ಬೈಡನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com