Vada Pav Girl ಪೊಲೀಸ್ ವಶಕ್ಕೆ: ದೆಹಲಿಯಲ್ಲಿ ಆಗಿದ್ದೇನು? ಸ್ಥಳೀಯರ ಆಕ್ರೋಶವೇಕೆ?

ಸಾಮಾಜಿಕ ಜಾಲತಾಣಗಳಲ್ಲಿ 'Vada Pav Girl' ಎಂದೇ ಖ್ಯಾತಿ ಗಳಿಸಿರುವ ಚಂದ್ರಿಕಾ ದೀಕ್ಸಿತ್ ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳೀಯರೇ ಆಕೆಯ ವಿರುದ್ದ ದೂರು ನೀಡಿದ್ದಾರೆ ಎನ್ನಲಾಗಿದೆ.
ಚಂದ್ರಿಕಾ ದೀಕ್ಷಿತ್ ಗಲಾಟೆ
ಚಂದ್ರಿಕಾ ದೀಕ್ಷಿತ್ ಗಲಾಟೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ 'Vada Pav Girl' ಎಂದೇ ಖ್ಯಾತಿ ಗಳಿಸಿರುವ ಚಂದ್ರಿಕಾ ದೀಕ್ಸಿತ್ ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳೀಯರೇ ಆಕೆಯ ವಿರುದ್ದ ದೂರು ನೀಡಿದ್ದಾರೆ ಎನ್ನಲಾಗಿದೆ.

ಹೌದು.. ಚಂದ್ರಿಕಾ ದೀಕ್ಸಿತ್ ಅಲಿಯಾಸ್ 'Vada Pav Girl' ಮೇಲೆ ಸ್ಥಳೀಯರೇ ಪೊಲೀಸ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ತನಿಖೆಗೆ ಬಂದಿದ್ದ ಪೊಲೀಸರ ಮೇಲೆಯೇ ಚಂದ್ರಿಕಾ ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.

ಚಂದ್ರಿಕಾ ದೀಕ್ಷಿತ್ ಗಲಾಟೆ
ಹಂಪಿ ಸ್ಮಾರಕ ಮೇಲೆ ನೃತ್ಯದ ರೀಲ್ಸ್ ಮಾಡಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡ ಬಂಧನ

ಏನಿದು ಘಟನೆ?

ಚಂದ್ರಿಕಾ ದೀಕ್ಸಿತ್ ದೆಹಲಿ ಮಂಗೋಲ್ ಪುರಿ ಪ್ರದೇಶದಲ್ಲಿ 'ವಡಪಾವ್' ಅಂಗಡಿ ಹೊಂದಿದ್ದು, ತಮ್ಮ ಅಂಗಡಿ ಕುರಿತ ವಿಡಿಯೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಈ ವಿಡಿಯೋಗಳು ಕೆಲವೇ ದಿನಗಳಲ್ಲಿ ವೈರಲ್ ಆಗಿ ತಮ್ಮ ಅಂಗಡಿಗೆ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುತ್ತಿತ್ತು. ಚಂದ್ರಿಕಾ ಕೂಡ ಇನ್ ಸ್ಟಾಗ್ರಾಂ ನಲ್ಲಿ ದಿನಕಳೆದಂತೆ 'Vada Pav Girl' ಎಂದು ಖ್ಯಾತಿ ಪಡೆದರು.

ಈ ಖ್ಯಾತೆ ಹೆಚ್ಚಾದಂತೆ ಚಂದ್ರಿಕಾ ಅಂಗಡಿ ಬಳಿಗೆ ವಿಡಿಯೋ ಮಾಡಲು ಹಲವು ಯೂಟ್ಯೂಬರ್ ಗಳ ದಂಡೇ ನೆರೆಯುತ್ತಿತ್ತು. ಚಿತ್ರೀಕರಣದಂತಹ ಸಂದರ್ಭಗಳಲ್ಲಿ ಅಲ್ಲಿ ಹೆಚ್ಚೆಚ್ಚು ಜನರು ಸೇರಿ ಅದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಹಲವು ಬಾರಿ ದೂರು ನೀಡಿದ್ದರೂ ಚಂದ್ರಿಕಾ ಮಾತ್ರ ಜನರನ್ನು ನಿಯಂತ್ರಿಸುವ ಕಾರ್ಯ ಮಾಡಿರಲಿಲ್ಲ.

ಅಲ್ಲದೆ ಇತ್ತೀಚೆಗೆ ಯೂಟ್ಯೂಬ್ ಮತ್ತು ಇನ್ ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ಚಂದ್ರಿಕಾ ತಮ್ಮ ಅಂಗಡಿ ಬಳಿ ಕಮ್ಯುನಿಟಿ ಫೆಸ್ಟ್ ಅಥವಾ ಭಂಡಾರ (ಆಹಾರ ಮೇಳ) ಆಯೋಜಿಸಿದ್ದರು. ಇದರಿಂದ ಇಲ್ಲಿ ಸಾಕಷ್ಟು ಜನರು, ಕಂಟೆಂಟ್ ಕ್ರಿಯೇಟರ್ ಗಳು ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಈ ಬಗ್ಗೆ ಸ್ಥಳೀಯರೊಬ್ಬರು ಚಂದ್ರಿಕಾರನ್ನು ಪ್ರಶ್ನಿಸಿದ್ದಾಗ ಆಕೆ ಅವರೊಂದಿಗೂ ಗಲಾಟೆ ಮಾಡಿಕೊಂಡಿದ್ದರು. ಒಂದು ಹಂತದಲ್ಲಿ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಚಂದ್ರಿಕಾ ಗಲಾಟೆ ಮಾಡಿದ್ದು ಬೇರೆ ದಾರಿ ಇಲ್ಲದೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಪರವಾನಗಿಯೇ ಇಲ್ಲದೇ ಅಂಗಡಿ ತೆರೆದಿದ್ದ 'Vada Pav Girl'

ಇನ್ನು ಪೊಲೀಸ್ ಮೂಲಗಳ ಪ್ರಕಾರ 'Vada Pav Girl' ಅಲಿಯಾಸ್ ಚಂದ್ರಿಕಾ ತಮ್ಮ ವಡಾಪಾವ್ ಅಂಗಡಿಗೆ ಸಂಬಂಧ ಪಟ್ಟ ಕಾರ್ಪೋರೇಷನ್ ನಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲವಂತೆ. ಅಲ್ಲದೆ ಜನಸಮೂಹದ ವಿಚಾರವಾಗಿ ಸ್ಥಳೀಯರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಪ್ರಶ್ನಿಸಲು ಬಂದವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆಯಬೇಕಾಯಿತು ಎಂದು ದೆಹಲಿ ಡಿಸಿಪಿ ಕಚೇರಿ ಹೇಳಿದೆ. ಅಲ್ಲದೆ ತಾವು ಆಕೆಯನ್ನು ಬಂಧಿಸಿಲ್ಲ.. ಬದಲಿಗೆ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಬಿಟ್ಟಿು ಕಳುಹಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು 'Vada Pav Girl' ಅಲಿಯಾಸ್ ಚಂದ್ರಿಕಾ ದೀಕ್ಷಿತ್ ಇನ್ ಸ್ಟಾಗ್ರಾಂ ನಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com