ಪಂಜಾಬ್: ಬೋಗಿಗಳು ಇಲ್ಲದೆ 3 ಕಿ.ಮಿ ಚಲಿಸಿದ ಜಮ್ಮು ಮೂಲದ ರೈಲ್ವೆ ಎಂಜಿನ್

ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದ್ದು, ಬೋಗಿಗಳಿಲ್ಲದೇ ಎಂಜಿನ್ ಬರೊಬ್ಬರಿ 3 ಕಿಮೀ ಮುಂದೆ ಸಾಗಿದೆ.
ಭಾರತೀಯ ರೈಲ್ವೇ
ಭಾರತೀಯ ರೈಲ್ವೇ

ಅಮೃತಸರ: ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದ್ದು, ಬೋಗಿಗಳಿಲ್ಲದೇ ಎಂಜಿನ್ ಬರೊಬ್ಬರಿ 3 ಕಿಮೀ ಮುಂದೆ ಸಾಗಿದೆ.

ಪಂಜಾಬ್ ನ ಸರ್‌ಹಿಂದ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬೋಗಿಗಳು ಇಲ್ಲದೆ ಎಂಜಿನ್‌ ಸುಮಾರು ಮೂರು ಕಿಲೋ ಮೀಟರ್ ದೂರ ಚಲಿಸಿದೆ. ದೆಹಲಿ–ಕಟ್ರಾ ರೈಲ್ವೆ ಮಾರ್ಗದಲ್ಲಿ ಕೆಲಸನಿರತ ಕೀಮ್ಯಾನ್ ಒಬ್ಬರು ಬೋಗಿಗಳು ಇಲ್ಲದೆ ಎಂಜಿನ್ ಚಲಿಸುತ್ತಿರುವುದನ್ನು ಲೋಕೊ ಪೈಲಟ್‌ ಗಮನಕ್ಕೆ ತಂದರು.

ಬಳಿಕ ಎಂಜಿನ್ ಹಿಂದಿರುಗಿ ಬಂದಿದೆ. ನಂತರ ಬೋಗಿಗಳನ್ನು ಜೋಡಿಸಿಕೊಂಡು ಮತ್ತೆ ರೈಲನ್ನು ಚಲಾಯಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತೀಯ ರೈಲ್ವೇ
ಕಾಶ್ಮೀರದಿಂದ ಪಂಜಾಬ್ ವರಗೆ ಚಾಲಕನಿಲ್ಲದೇ ಚಲಿಸಿದ ರೈಲು, ವೇಗ ನೋಡಿ ಬೆಚ್ಚಿಬಿದ್ದ ಜನ!

ಎಂಜಿನ್‌ನೊಂದಿಗೆ ಬೋಗಿಗಳನ್ನು ಸಡಿಲವಾಗಿ ಜೋಡಿಸಿದ್ದರಿಂದ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಉತ್ತರ ರೈಲ್ವೆ ವಲಯದ ವಿಭಾಗೀಯ ವ್ಯವಸ್ಥಾಪಕ ನವೀನ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com