ಲೋಕಸಭಾ ಚುನಾವಣೆ: ಮೇ 14ಕ್ಕೆ ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಭಾನುವಾರ ಈ ವಿಷಯ ತಿಳಿಸಿದ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ, ಮೇ 13 ರಂದು ಮೋದಿ ಅವರು ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿರುವುದಾಗಿ ತಿಳಿಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಭಾನುವಾರ ಈ ವಿಷಯ ತಿಳಿಸಿದ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ, ಮೇ 13 ರಂದು ಮೋದಿ ಅವರು ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿರುವುದಾಗಿ ತಿಳಿಸಿದರು.

"ರೋಡ್‌ಶೋಗೆ ಮಾರ್ಗವನ್ನು ಅಂತಿಮಗೊಳಿಸಲಾಗಿದೆ, ಮೇ 14 ರಂದು ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ" ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ವಾರಣಾಸಿಯಲ್ಲಿ ಕಾಂಗ್ರೆಸ್ ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರೈ ಮತ್ತು ಬಿಎಸ್ ಪಿ ಅಥರ್ ಜಮಾಲ್ ಲಾರಿ ಅವರನ್ನು ಕಣಕ್ಕಿಳಿಸಿದೆ.

ಪ್ರಧಾನಿ ಮೋದಿ
ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ, ಅಲ್ಲಿ ಪಾಕಿಸ್ತಾನ ರಾಹುಲ್ ಪ್ರಧಾನಿಯಾಗಲಿ ಎಂದು ಅಳುತ್ತಾ ಪ್ರಾರ್ಥಿಸುತ್ತಿದೆ: ಪ್ರಧಾನಿ ಮೋದಿ

ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಮತ್ತು ಕೊನೆಯ ಸುತ್ತಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣೆ ನಡೆಯಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com