West Nile fever: ಕೇರಳದಲ್ಲಿ ವೆಸ್ಟ್ ನೈಲ್ ಜ್ವರದ ಭೀತಿ; ಐದು ಪ್ರಕರಣ ದೃಢ, ತೀವ್ರ ಕಟ್ಟೆಚ್ಚರ; ಸೋಂಕಿಗೆ ಚಿಕಿತ್ಸೆಯೇ ಇಲ್ಲ!

ನಿಫಾ, ಕೋವಿಡ್, ಹಕ್ಕಿಜ್ವರ, ಹಂದಿಜ್ವರದ ಭೀತಿ ಬೆನ್ನಲ್ಲೇ ಇದೀಗ ಕೇರಳದಲ್ಲಿ ವೆಸ್ಟ್ ನೈಲ್ ಜ್ವರದ ಭೀತಿ ಎದುರಾಗಿದ್ದು, ಈ ವರೆಗೂ ಕೇರಳದಲ್ಲಿ ಇಂತಹ ಐದು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.
West Nile fever
ವೆಸ್ಟ್ ನೈಲ್ ಜ್ವರ
Updated on

ಕೊಚ್ಚಿನ್: ನಿಫಾ, ಕೋವಿಡ್, ಹಕ್ಕಿಜ್ವರ, ಹಂದಿಜ್ವರದ ಭೀತಿ ಬೆನ್ನಲ್ಲೇ ಇದೀಗ ಕೇರಳದಲ್ಲಿ ವೆಸ್ಟ್ ನೈಲ್ ಜ್ವರದ ಭೀತಿ ಎದುರಾಗಿದ್ದು, ಈ ವರೆಗೂ ಕೇರಳದಲ್ಲಿ ಇಂತಹ ಐದು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಉತ್ತರ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪಶ್ಚಿಮ ನೈಲ್ ಜ್ವರದ ಐದು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮಕ್ಕಳನ್ನು ಒಳಗೊಂಡಂತೆ ಸೋಂಕಿತ ವ್ಯಕ್ತಿಗಳು ಚಿಕಿತ್ಸೆ ಬಳಿಕ ಗುಣಮುಕರಾಗಿ ಅವರ ಮನೆಗಳಿಗೆ ಹಿಂತಿರುಗಿದ್ದಾರೆ, ಅವರು ವಾಸಿಸುವ ಪ್ರದೇಶಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

West Nile fever
ಯುಎಇಯಿಂದ ವಾಪಸ್ಸಾಗಿದ್ದ ಕೇರಳ ಮೂಲದ ವ್ಯಕ್ತಿಯಲ್ಲಿ ಮೊದಲ ಮಂಕಿಪಾಕ್ಸ್ ಸೋಂಕು ಪತ್ತೆ; ಕೇಂದ್ರದಿಂದ ಉನ್ನತ ಮಟ್ಟದ ತಂಡ ರವಾನೆ

ಪ್ರಸ್ತುತ ಈ ವೆಸ್ಟ್ ನೈಲ್ ಜ್ವರ, ಮನುಷ್ಯರಿಂದ ಮನುಷ್ಯರಿಗೆ ಹರುಡುತ್ತೆದೆ ಎಂದು ಹೇಳಲಾಗಿದ್ದು, ಹಲವು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ರೋಗದ ಲಕ್ಷಣಗಳನ್ನು ಪ್ರದರ್ಶಿಸಿದ ಮತ್ತು ಚಿಕಿತ್ಸೆಗೆ ಒಳಗಾದವರ ಮಾದರಿಗಳನ್ನು ಸಾಮಾನ್ಯದಂತೆಯೇ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಈ ಪರೀಕ್ಷೆಯ ಫಲಿತಾಂಶಗಳು ಈಗ ಬಂದಿದ್ದು, ಅವರು ವೆಸ್ಟ್ ನೈಲ್ ಜ್ವರದಿಂದ ಬಳಲುತ್ತಿದ್ದಾರೆ. ಅವರಿಕೆ ಸೂಕ್ತಕಾಲದಲ್ಲಿ ಚಿಕಿತ್ಸೆ ನೀಡಲಾಗಿದ್ದರಿಂದ ಅವರೆಲ್ಲರೂ ಈಗ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದರು.

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುಲಭವಾಗಿ ಹರಡುವ ಈ ವೆಸ್ಟ್ ನೈಲ್ ವೈರಸ್ ಈ ಹಿಂದೆ ಆಫ್ರಿಕಾದಿಂದ ಏಷ್ಯಾ, ಯುರೋಪ್ ಹಾಗೂ ಉತ್ತರ ಅಮೆರಿಕಾಗೆ ಲಗ್ಗೆಯಿಟ್ಟಿತ್ತು. ಇದೀಗ ಭಾರತದಲ್ಲೂ ಇದರ ಸೋಂಕಿತರು ಕಂಡುಬಂದಿದ್ದಾರೆ. ಕಡಿಮೆ ತಾಪಮಾನ ಮತ್ತು ಅತಿಯಾದ ಮಳೆ ಇವುಗಳ ಸಂತತಿಗೆ ಹೆಚ್ಚು ಆಹ್ಲಾದಕರ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತವೆ.

ಸೊಳ್ಳೆಗಳ ಮೂಲಕ ಈ ಕಾಯಿಲೆ ಬಹಳ ವೇಗವಾಗಿ ಹರಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಕೇವಲ ಇದು ಮಾತ್ರವಲ್ಲದೆ ಹಲವು ಬಗೆಯ ಕಾಯಿಲೆಗಳನ್ನು ನಾವು ನಿರೀಕ್ಷೆ ಮಾಡಬಹುದು. ಸೊಳ್ಳೆ ಕಚ್ಚುವುದರಿಂದ ಹರಡುವ ಈ ಕಾಯಿಲೆ ಮನುಷ್ಯನ ನರಮಂಡಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ರೋಗಲಕ್ಷಣ

ಸಾಮಾನ್ಯವಾಗಿ ಮೊಟ್ಟಮೊದಲ ಬಾರಿಗೆ ಈ ಸೋಂಕಿಗೆ ಒಳಗಾದ ಜನರಲ್ಲಿ ಯಾವುದೇ ಬಗೆಯ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ಆನಂತರದಲ್ಲಿ ತಲೆನೋವು, ಜ್ವರ, ಚರ್ಮದಲ್ಲಿ ದದ್ದುಗಳು, ಮೈಕೈ ನೋವು ಮತ್ತು ಉರಿಯೂತದಿಂದ ಬಳಲುವ ದುಗ್ಧರಸ ಗ್ರಂಥಿಗಳು ಕಾಣಿಸುತ್ತವೆ.

ಈ ವೈರಸ್ ರೋಗ ಲಕ್ಷಣಗಳು ವ್ಯಕ್ತಿಯಲ್ಲಿ ಕೆಲವು ದಿನಗಳಿಂದ ಹಲವು ವಾರಗಳವರೆಗೆ ಇರಬಹುದು. ಅಪ್ಪಿತಪ್ಪಿ ವೈರಸ್ ಮೆದುಳಿನ ಭಾಗಕ್ಕೆ ಸೇರ್ಪಡೆಯಾದರೆ, ಅಲ್ಲಿ ಮೆದುಳಿನ ಜೀವಕೋಶಗಳ ಉರಿಯೂತ ಉಂಟಾಗುತ್ತದೆ. ಮುಖ್ಯವಾಗಿ ಬೆನ್ನುಹುರಿಯಲ್ಲಿ ಸಮಸ್ಯೆ ಕಾರಣ ಮೆನಿಂಜೈಟಿಸ್ ಕಂಡುಬರುತ್ತದೆ.

West Nile fever
ಕೋವಿಡ್ ಸಾಂಕ್ರಾಮಿಕ: 4ನೇ ಸ್ಥಾನಕ್ಕೆ ಇಳಿದ ಕರ್ನಾಟಕ, ಅಗ್ರಸ್ಥಾನದಲ್ಲೇ ಉಳಿದ ಕೇರಳ

ಮಕ್ಕಳು, ದೊಡ್ಡವರು ಮತ್ತು ವಯಸ್ಸಾದವರು ಮತ್ತು ಯಾರಿಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ತುಂಬ ದುರ್ಬಲವಾಗಿರುತ್ತದೆ. ಅಂತಹವರು ಈ ವಿಚಾರದಲ್ಲಿ ತುಂಬಾ ಎಚ್ಚರಿಕೆ ಮತ್ತು ಆರೋಗ್ಯದಲ್ಲಿ ಜಾಗೃತೆಯನ್ನು ವಹಿಸಬೇಕು.

ಈ ವೈರಸ್ ಸೋಂಕಿಗೆ ಚಿಕಿತ್ಸೆಯೇ ಇಲ್ಲ

ವಿಶ್ವ ಆರೋಗ್ಯ ಸಂಸ್ಥೆ ಮೊದಲೇ ಹೇಳಿದ ಹಾಗೆ ಮನುಷ್ಯರಿಗೆ ಎದುರಾಗುವ ವೆಸ್ಟ್ ನೈಲ್ ವೈರಸ್ ಕಾಯಿಲೆಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಸೊಳ್ಳೆಗಳ ಹಾವಳಿಯನ್ನು ಮತ್ತು ಸಂತತಿಯನ್ನು ತಡೆಯುವುದು ಇದಕ್ಕಿರುವ ಪ್ರಮುಖ ಪರಿಹಾರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com