1950 ರಿಂದ 2015ರ ನಡುವೆ ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಆರ್ಥಿಕ ಸಲಹಾ ಮಂಡಳಿಯು ಪ್ರಧಾನಿಗೆ (ಇಎಸಿ-ಪಿಎಂ) ನೀಡಿರುವ ವರದಿ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ವಾಗ್ದಾಳಿ ನಡೆಸಿದ್ದು, ದೇಶವು ಕಾಂಗ್ರೆಸ್‌ ಆಡಳಿತಕ್ಕೆ ಸಿಕ್ಕಿಬಿಟ್ಟರೆ ಹಿಂದೂಗಳಿಗೆ ದೇಶವೇ ಇರುವುದಿಲ್ಲ ಎಂದಿದ್ದಾರೆ.
ಅಮಿತ್‌ ಮಾಳವೀಯ
ಅಮಿತ್‌ ಮಾಳವೀಯ

ನವದೆಹಲಿ: ಆರ್ಥಿಕ ಸಲಹಾ ಮಂಡಳಿಯು ಪ್ರಧಾನಿಗೆ (ಇಎಸಿ-ಪಿಎಂ) ನೀಡಿರುವ ವರದಿ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ವಾಗ್ದಾಳಿ ನಡೆಸಿದ್ದು, ದೇಶವು ಕಾಂಗ್ರೆಸ್‌ ಆಡಳಿತಕ್ಕೆ ಸಿಕ್ಕಿಬಿಟ್ಟರೆ ಹಿಂದೂಗಳಿಗೆ ದೇಶವೇ ಇರುವುದಿಲ್ಲ ಎಂದಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, '1950 ಮತ್ತು 2015 ರ ನಡುವೆ ಹಿಂದೂಗಳ ಜನಸಂಖ್ಯೆಯು ಶೇ 7.8 ರಷ್ಟು ಕಡಿಮೆಯಾಗಿದ್ದು, ಮುಸ್ಲಿಂ ಜನಸಂಖ್ಯೆಯು ಶೇ 43 ರಷ್ಟು ಹೆಚ್ಚಾಗಿದೆ. ದಶಕಗಳ ಕಾಂಗ್ರೆಸ್ ಆಡಳಿತವು ನಮಗೆ ಮಾಡಿದ್ದು ಇದನ್ನೇ. ಕಾಂಗ್ರೆಸ್‌ಗೆ ದೇಶವನ್ನು ಬಿಟ್ಟರೆ, ಹಿಂದೂಗಳಿಗಾಗಿ ದೇಶವೇ ಇಲ್ಲದಂತಾಗುತ್ತದೆ' ಎಂದಿದ್ದಾರೆ.

ಭಾರತದಲ್ಲಿ 1950 ಮತ್ತು 2015 ರ ನಡುವೆ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯು ಶೇ 7.82 ರಷ್ಟು ಕಡಿಮೆಯಾಗಿದೆ (ಶೇ 84.68 ರಿಂದ 78.06 ಕ್ಕೆ ಕುಸಿತ). ಆದರೆ, 1950 ರಲ್ಲಿ ಶೇ 9.84 ರಷ್ಟಿದ್ದ ಮುಸ್ಲಿಂ ಜನಸಂಖ್ಯೆಯು 2015ರಲ್ಲಿ ಶೇ 14.09 ಕ್ಕೆ ಏರಿದೆ. ಈ ಅವಧಿಯಲ್ಲಿ ಅವರ ಜನಸಂಖ್ಯೆ ಶೇ 43.15 ರಷ್ಟು ಹೆಚ್ಚಳವಾಗಿದೆ ಎಂದು ಇಎಸಿ ವರದಿ ತಿಳಿಸಿದ್ದು, ಈ ವರದಿಯ ಬೆನ್ನಲ್ಲೇ ಅಮಿತ್ ಮಾಳವೀಯ ವಾಗ್ದಾಳಿ ನಡೆಸಿದ್ದಾರೆ.

ಈಮಧ್ಯೆ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಹಿಂದೂ ಜನಸಂಖ್ಯೆಯ ಇಳಿಕೆಗೆ ಕಾಂಗ್ರೆಸ್ ಹೊಣೆಯಾಗಿದ್ದು, ಪಕ್ಷದ ಮುಸ್ಲಿಂ ತುಷ್ಟೀಕರಣದ ರಾಜಕೀಯದಿಂದಾಗಿ ಮುಸ್ಲಿಂ ಜನಸಂಖ್ಯೆ ಏರಿಕೆಯಾಗಿದೆ ಎಂದು ದೂರಿದರು.

ಎಎನ್‌ಐ ಜೊತೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, ಇದು ಕಳವಳಕಾರಿ ವಿಷಯವಾಗಿದೆ ಮತ್ತು ಮುಸ್ಲಿಂ ಜನಸಂಖ್ಯೆಯ ಏರಿಕೆ ಮತ್ತು ಹಿಂದೂ ಜನಸಂಖ್ಯೆಯಲ್ಲಿ ಇಳಿಕೆಯಾಗಿರುವ ಈ ಅಸಮತೋಲನವು ಕಾಂಗ್ರೆಸ್‌ನ ಮುಸ್ಲಿಂ ಓಲೈಕೆಯಿಂದಾಗಿ ಸಂಭವಿಸಿದೆ ಎಂದಿದ್ದಾರೆ.

ಅಮಿತ್‌ ಮಾಳವೀಯ
ಬಿಜೆಪಿ-ಆರ್ ಎಸ್ಎಸ್ ತಪ್ಪು ಹೇಳುತ್ತಿವೆ, ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ ಕುಸಿಯುತ್ತಿದೆ: ದಿಗ್ವಿಜಯ್ ಸಿಂಗ್

ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗ್‌ನಂತೆ ಕೆಲಸ ಮಾಡಿದೆ ಮತ್ತು ಆದ್ದರಿಂದ ದೇಶವು ಜನಸಂಖ್ಯೆಯಲ್ಲಿ ಅಸಮತೋಲನಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ, ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅಗತ್ಯವಿದೆ. ಹಿಂದೂಗಳಂತೆ, ಮುಸ್ಲಿಮರು ಒಬ್ಬ ವ್ಯಕ್ತಿಯನ್ನು ಮಾತ್ರ ಮದುವೆಯಾಗುತ್ತಾರೆಯೇ. ನಾವು 5 ಮತ್ತು ನಮ್ಮ 25 ಎಂಬ ಸೂತ್ರವು ಸಮತೋಲನವನ್ನು ಹಾಳುಮಾಡುತ್ತದೆ. ದೇಶದಲ್ಲಿ ಮತ್ತೊಂದು ಪಾಕಿಸ್ತಾನದ ಬೇಡಿಕೆ ಏಳದಂತೆ ತಡೆಯಲು ಏಕರೂಪ ನಾಗರಿಕ ಸಂಹಿತೆ ಮುಖ್ಯವಾಗಿದೆ ಎಂದು ತಿಳಿಸಿದರು.

ಇಎಸಿ ವರದಿಯ ಪ್ರಕಾರ, 1950 ಮತ್ತು 2015ರ ನಡುವೆ ಕ್ರಿಶ್ಚಿಯನ್ ಜನಸಂಖ್ಯೆಯು ಶೇ 2.24 ರಿಂದ 2.36 (ಶೇ 5.38 ರಷ್ಟು ಹೆಚ್ಚಳ)ಕ್ಕೆ ಏರಿಕೆಯಾಗಿದೆ. 1950 ರಲ್ಲಿ ಶೇ 1.24 ರಷ್ಟಿದ್ದ ಸಿಖ್ ಜನಸಂಖ್ಯೆಯು 2015 ರಲ್ಲಿ ಶೇ 1.85ಕ್ಕೆ ಏರಿಕೆಯಾಗಿದೆ. ಬೌದ್ಧರ ಜನಸಂಖ್ಯೆಯು ಸಹ ಶೇ 0.05 ರಿಂದ ಶೇ 0.81 ರಷ್ಟು ಹೆಚ್ಚಳವಾಗಿದೆ.

ಮತ್ತೊಂದೆಡೆ, ಭಾರತದ ಜನಸಂಖ್ಯೆಯಲ್ಲಿ ಜೈನರ ಪಾಲು 1950 ರಲ್ಲಿ ಶೇ 0.45 ರಿಂದ 2015 ರಲ್ಲಿ ಶೇ 0.36 ಕ್ಕೆ ಇಳಿಕೆಯಾಗಿದೆ. ಪಾರ್ಸಿ ಜನಸಂಖ್ಯೆಯು ಶೇ 85 ರಷ್ಟು ಕುಸಿತ ಕಂಡಿದೆ. 1950ರಲ್ಲಿ ಶೇ 0.03 ರಿಂದ 2015ರಲ್ಲಿ ಶೇ 0.004 ಕ್ಕೆ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com