120ಕ್ಕೂ ಹೆಚ್ಚು ಮಹಿಳೆಯರ Rape ಮಾಡಿ ಸಿಡಿ ಮಾಡಿದ್ದ ಜಿಲೇಬಿ ಬಾಬಾ ಜೈಲಲ್ಲೇ ಸಾವು!

120ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ಮಾಡಿ ವಿಡಿಯೋ ಸಿಡಿ ಮಾಡಿದ್ದ ಆರೋಪದ ಮೇರೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹರ್ಯಾಣದ ಸ್ವಯಂ ಘೋಷಿತ ದೇವಮಾನವ ಜಿಲೇಬಿ ಬಾಬಾ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಿಲೇಬಿ ಬಾಬಾ ಸಾವು
ಜಿಲೇಬಿ ಬಾಬಾ ಸಾವು

ಚಂಡೀಘಡ: 120ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ಮಾಡಿ ವಿಡಿಯೋ ಸಿಡಿ ಮಾಡಿದ್ದ ಆರೋಪದ ಮೇರೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹರ್ಯಾಣದ ಸ್ವಯಂ ಘೋಷಿತ ದೇವಮಾನವ ಜಿಲೇಬಿ ಬಾಬಾ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಓರ್ವ ಅಪ್ರಾಪ್ತೆಯೂ ಸೇರಿದಂತೆ ತನ್ನ ಮೂವರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದ ಆರೋಪ ಈತನ ಮೇಲಿತ್ತು. ಈ ಪ್ರಕರಣದಲ್ಲಿ ಈತ ದೋಷಿ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಈತನಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಈತನನ್ನು ಹರ್ಯಾಣದ ಹಿಸ್ಸಾರ್ ಜೈಲಿನಲ್ಲಿರಿಸಲಾಗಿತ್ತು. ಆದರೆ ಈಗ ಆತ ಜೈಲಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮೂಲಗಳ ಪ್ರಕಾರ ಜಿಲೇಬಿ ಬಾಬಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಅನಾರೋಗ್ಯದಿಂದ ಆತನಿಗೆ ಹೃದಯಾಘಾತವಾಗಿದೆ ಎಂದು ಆತನ ಪರ ವಕೀಲ ಗಜೇಂದ್ರ ಪಾಂಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜಿಲೇಬಿ ಬಾಬಾ ಸಾವು
ಅಶ್ಲೀಲ ವಿಡಿಯೋ ಪ್ರಕರಣ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು, ಹೆಚ್ಚಿದ ಸಂಕಷ್ಟ!

ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಮಂಗಳವಾರ ರಾತ್ರಿಯೇ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಹರ್ಯಾಣದ ಫತೇಹಬಾದ್ ಜಿಲ್ಲೆಯಲ್ಲಿ ತಳ್ಳುಗಾಡಿಯಲ್ಲಿ ಜಿಲೇಬಿ ಮಾರಾಟ ಮಾಡುತ್ತಿದ್ದ, ಬಾಬಾ ಬಿಲ್ಲು ರಾಮ್ ಎಂಬ ಈತ ಬಳಿಕ ಸ್ವಯಂ ಘೋಷಿತ ದೇವ ಮಾನವನಾಗಿ ಘೋಷಿಸಿಕೊಂಡಿದ್ದ. ಈತನ ಆಶ್ರಮಕ್ಕೆ ಬಂದಿದ್ದ ಸುಮಾರು 120ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅದನ್ನು ವಿಡಿಯೋ ಸಿಡಿ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿ ಬೆದರಿಸಿ ಮತ್ತೆ ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಚಹಾದಲ್ಲಿ ಮತ್ತು ಬರುವ ಔಷಧಿ ನೀಡಿ ಮಹಿಳೆಯರನ್ನುಈತ ಅತ್ಯಾಚಾರ ಮಾಡುತ್ತಿದ್ದ, ಈತನ ಕೆಲ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಆತನ ಆಶ್ರಮದಲ್ಲಿ ಪೊಲೀಸರು ಅಶ್ಲೀಲ ಸೀಡಿಗಳನ್ನು ಕೂಡ ಪತ್ತೆ ಮಾಡಿದ್ದರು. 2018ರಲ್ಲಿ ಜಿಲೇಬಿ ಬಾಬಾನ ವೀಡಿಯೋಗಳು ವೈರಲ್ ಆಗಿದ್ದವಂತೆ. ಮಹಿಳೆಯರೊಂದಿಗಿನ ಬಾಬಾ ಅಶ್ಲೀಲ ನಡವಳಿಕೆ ನೋಡಿದ್ದ ಜನ ಬಾಬಾ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸಿದ್ದರು.

ಇದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು, 2020ರಲ್ಲಿ ಆತನ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿತ್ತು. ಇದಾದ ನಂತರ ಫತೇಹಾಬಾದ್ ನ್ಯಾಯಾಲಯ ಈತನಿಗೆ 35 ಸಾವಿರ ರೂಪಾಯಿ ದಂಡ, 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com