ಮೂರನೇ ಹಂತದ ಲೋಕಸಭಾ ಚುನಾವಣೆ: ಒಟ್ಟು ಶೇ.65.68 ರಷ್ಟು ಮತದಾನ- ಚುನಾವಣಾ ಆಯೋಗ

ಮೂರನೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಶೇ.65. 68 ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಮೇ 7 ರಂದು 11 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ 93 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೂರನೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಶೇ.65. 68 ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಮೇ 7 ರಂದು 11 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ 93 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಚುನಾವಣೆ ಮುಗಿದ 4 ದಿನಗಳ ಬಳಿಕ ಆಯೋಗ ಒಟ್ಟು ಶೇಕಡಾವಾರು ಮತದಾನದ ಪ್ರಮಾಣವನ್ನು ಹಂಚಿಕೊಂಡಿದೆ. ಮೂರನೇ ಹಂತದ ಮತದಾನದಲ್ಲಿ ಶೇ. 66. 89 ರಷ್ಟು ಪುರುಷರು, ಶೇ. 64.41 ರಷ್ಟು ಮಹಿಳೆಯರು, ಶೇ. 25. 2 ರಷ್ಟು ತೃತೀಯ ಲಿಂಗಿಗಳು ಮತದಾನ ಮಾಡಿರುವುದಾಗಿ ಹೇಳಿದೆ.

ಚುನಾವಣಾ ಆಯೋಗದ ವಿವರ
ಚುನಾವಣಾ ಆಯೋಗದ ವಿವರ
ಸಾಂದರ್ಭಿಕ ಚಿತ್ರ
ಅರಾಜಕತೆ ಸೃಷ್ಟಿಸುವ ಯತ್ನ: ಮತದಾನ ಪ್ರಮಾಣದ ಬಗ್ಗೆ ಖರ್ಗೆ ಹೇಳಿಕೆಗೆ ಚುನಾವಣಾ ಆಯೋಗ ತರಾಟೆ!

2019 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಹೋಲಿಸಿದರೆ ಮತದಾನದ ಪ್ರಮಾಣದಲ್ಲಿ ಶೇಕಡಾ 1.65 ರಷ್ಟು ಕಡಿಮೆಯಾಗಿದೆ. 2019 ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮೊದಲ ಎರಡು ಹಂತಗಳಲ್ಲಿ ನಡೆದ ಮತದಾನದ ಪ್ರಮಾಣವು ಕ್ರಮವಾಗಿ ಶೇ. 4 ಮತ್ತು 3 ರಷ್ಟು ಕಡಿಮೆಯಾಗಿದೆ. ಮೊದಲ ಎರಡು ಹಂತಗಳು ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com