
ಹೈದರಾಬಾದ್: ಬಿಜೆಪಿಯಲ್ಲಿ ಚುನಾಯಿತ ಪ್ರತಿನಿಧಿಗೆ ನಿವೃತ್ತಿಗೆ 75 ವರ್ಷ ಎಂದು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೂ ಈ ನಿಯಮ ಅನ್ವಯವಾಗುತ್ತದೆಯೇ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.
ಚುನಾಯಿತ ಪ್ರತಿನಿಧಿಗೆ ಬಿಜೆಪಿಯಲ್ಲಿ ನಿವೃತ್ತಿಗೆ 75 ವರ್ಷ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಇದರಿಂದಾಗಿ ಅವರು ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಹಿರಿಯ ನಾಯಕರ ವಿರುದ್ಧ ಬಲವಂತವಾಗಿ ನಿರ್ಣಯ ಕೈಗೊಂಡಿದ್ದಾರೆ. ಇದೀಗ ನರೇಂದ್ರ ಮೋದಿ 74 ವರ್ಷ ದಾಟಿದೆ, ಇನ್ನೂ ಒಂದು ವರ್ಷ ಉಳಿದಿದೆ, ನಾನು ಅದೇ ಪ್ರಶ್ನೆಯನ್ನು ನರೇಂದ್ರ ಮೋದಿಯವರಿಗೆ ಕೇಳಲು ಬಯಸುತ್ತೇನೆ, ನೀವು 75 ನೇ ವಯಸ್ಸಿನಲ್ಲಿ ನಿವೃತ್ತರಾಗಲು ಸಿದ್ಧರಿದ್ದೀರಾ ಎಂದು ಕೇಳಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಕೂಡ ಪ್ರಧಾನಿ ಮೋದಿಯವರ ಆರ್ಥಿಕ ನೀತಿಗಳ ಬಗ್ಗೆ ಪ್ರಶ್ನಿಸಿದ್ದಾರೆ. ಇನ್ನೂ ಒಂದು ವಿಷಯವನ್ನು ನೆನಪಿಸಬಯಸುತ್ತೇನೆ, 1947ರಿಂದ 2014ರವರೆಗೆ 14 ಪ್ರಧಾನಿಗಳು ಸುಮಾರು 67 ವರ್ಷಗಳ ಕಾಲ 55 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರಧಾನಿ ಮೋದಿ 10 ವರ್ಷಗಳಲ್ಲಿ 113 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ಸಂಕಷ್ಟ ಎದುರಿಸುತ್ತಿದೆ. ಮೋದಿಯವರು ಯಾವುದೇ ದಾಖಲೆಗಳನ್ನು ನೀಡಿದರೂ ನಾವು ನಂಬುವ ಸ್ಥಿತಿಯಲ್ಲಿಲ್ಲ. ಚುನಾವಣೆಯನ್ನು ಗೆಲ್ಲಲು ಅವರು ಯಾವುದೇ ಮಟ್ಟಕ್ಕೆ ಇಳಿಯಲು ಸಾಧ್ಯ. ಅವರಿಗೆ ಆ ವಿಶ್ವಾಸಾರ್ಹತೆಯೇ ಇಲ್ಲ ಎಂದು ಟೀಕಿಸಿದರು.
ತೆಲಂಗಾಣ ಪ್ರಚಾರ ವೇಳೆ ಸಿಎಂ ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ರಾಜ್ಯದ ಜನರು ಡಬಲ್ ಆರ್ ತೆರಿಗೆಯ ಹೊರೆ ಹೊರಬೇಕಾಗಿದೆ ಎಂದು ಟೀಕಿಸಿದ್ದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಡಬಲ್ ಆರ್ ಟ್ಯಾಕ್ಸ್ ಬಗ್ಗೆ ಚರ್ಚೆಯಾಗುತ್ತಿದೆ. ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ತೆಲಂಗಾಣದ ಎಲ್ಲಾ 17 ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದೆ.
Advertisement