
ನವದೆಹಲಿ: ನೈಋತ್ಯ ಮುಂಗಾರು ಮೇ 31 ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ. ಇದು ಕೃಷಿ ಆಧಾರಿತ ಭಾರತದ ಆರ್ಥಿಕತೆಗೆ ನಿರ್ಣಾಯಕವಾದ ನಾಲ್ಕು ತಿಂಗಳ ಮಳೆಗಾಲಕ್ಕೆ ವೇದಿಕೆಯಾಗಿದೆ. ಈ ಬಾರಿ ನೈರುತ್ಯ ಮುಂಗಾರು ನಾಲ್ಕು ದಿನ ಏರು ಪೇರಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.
"ಇದು ಮುಂಚೆಯೇ ಅಲ್ಲ. ವಾಡಿಕೆ ದಿನಾಂಕದ ಸಮೀಪದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
IMD ದತ್ತಾಂಶದ ಪ್ರಕಾರ ಕೇರಳದಲ್ಲಿ ಮುಂಗಾರು ಆರಂಭದ ದಿನಾಂಕ ಕಳೆದ 150 ವರ್ಷಗಳಲ್ಲಿ ವ್ಯಾಪಕವಾಗಿ ಬದಲಾಗಿದೆ ಮೇ 11, 1918 ರಂದು ಬೇಗನೆ ಪ್ರವೇಶಿಸಿತ್ತು. ಜೂನ್ 18, 1972 ರಂದು ಹೆಚ್ಚು ವಿಳಂಬವಾಗಿತ್ತು.
ಕಳೆದ ವರ್ಷ ಜೂನ್ 8 ರಂದು, 2022 ರಲ್ಲಿ ಮೇ 29 ರಂದು ದಕ್ಷಿಣ ರಾಜ್ಯಗಳಲ್ಲಿ ಮಳೆಗಾಲದ ಪರಿಸ್ಥಿತಿ ಆರಂಭವಾಗಿತ್ತು. ಈ ಬಾರಿ ಸಾಧಾರಣಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement