ಬಸ್ ನಲ್ಲಿ ಬೆಂಕಿ 8ಮಂದಿ ಸಜೀವ ದಹನ
ಬಸ್ ನಲ್ಲಿ ಬೆಂಕಿ 8ಮಂದಿ ಸಜೀವ ದಹನ

ಹರ್ಯಾಣ: ಚಲಿಸುತ್ತಿದ್ದ ಬಸ್ಸಿಗೆ ಹೊತ್ತಿಕೊಂಡ ಬೆಂಕಿ; 9 ಮಂದಿ ಸಜೀವ ದಹನ, 15 ಜನರಿಗೆ ಗಾಯ

ಹರಿಯಾಣದ ನುಹ್ ಜಿಲ್ಲೆಯ ತೌರು ಬಳಿ ಶನಿವಾರ ಮುಂಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಒಂಬತ್ತು ಜನರು ಸಜೀವ ದಹನವಾಗಿದ್ದು ,15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನುಹ್ : ಹರಿಯಾಣದ ನುಹ್ ಜಿಲ್ಲೆಯ ತೌರು ಬಳಿ ಶನಿವಾರ ಮುಂಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಒಂಬತ್ತು ಜನರು ಸಜೀವ ದಹನವಾಗಿದ್ದು ,15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಲುಧಿಯಾನ ನಿವಾಸಿಗಳು ಮಥುರಾ ಮತ್ತು ವೃಂದಾವನದ ಯಾತ್ರಿ ಪಟ್ಟಣಗಳಿಂದ ಹಿಂತಿರುಗುತ್ತಿದ್ದ ಸುಮಾರು 60 ಜನರನ್ನು ಬಸ್ ಹೊತ್ತೊಯ್ಯುತ್ತಿದ್ದರು. ಇವರೆಲ್ಲರೂ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ನಲ್ಲಿ ಬೆಂಕಿ 8ಮಂದಿ ಸಜೀವ ದಹನ
ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬಸ್ಸು-ಲಾರಿ ಡಿಕ್ಕಿ: 6 ಮಂದಿ ಸಜೀವ ದಹನ

ಒಂಬತ್ತು ಮಂದಿಯಲ್ಲಿ, ಆರು ಮಹಿಳೆಯರು ಮತ್ತು ಮೂವರು ಪುರುಷರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹದಿನೈದು ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಕೆಲವರು ದ್ವಿಚಕ್ರವಾಹನದಲ್ಲಿ ಬಸ್ ಅನ್ನು ಹಿಂಬಾಲಿಸಿ ಚಾಲಕನನ್ನು ನಿಲ್ಲಿಸುವಂತೆ ಹೇಳಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

X

Advertisement

X
Kannada Prabha
www.kannadaprabha.com