ಜಮ್ಮು-ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ: ನಾಗರೀಕರ ಹತ್ಯೆಗೆ ಖಂಡನೆ, ಅಂತಾರಾಷ್ಟ್ರೀಯ ತನಿಖೆಗೆ ಫಾರೂಕ್ ಅಬ್ದುಲ್ಲಾ ಆಗ್ರಹ!

ಶೋಪಿಯಾನ್ ಮತ್ತು ಅನಂತ್‌ನಾಗ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ನಾಗರೀಕರು ಸಾವನ್ನಪ್ಪಿದ್ದು, ಈ ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಖಂಡಿಸಿದ್ದು, ಅಂತರಾಷ್ಟ್ರೀಯ ತನಿಖೆಗೆ ಆಗ್ರಹಿಸಿದ್ದಾರೆ.
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ
Updated on

ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಶೋಪಿಯಾನ್ ಮತ್ತು ಅನಂತ್‌ನಾಗ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ನಾಗರೀಕರು ಸಾವನ್ನಪ್ಪಿದ್ದು, ಈ ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಖಂಡಿಸಿದ್ದು, ಅಂತರಾಷ್ಟ್ರೀಯ ತನಿಖೆಗೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ನೂ ಅಸ್ತಿತ್ವದಲ್ಲಿದೆ. ಹತ್ಯೆಯಾದ ವ್ಯಕ್ತಿ ಯಾವುದೇ ಪಕ್ಷದ ಸದರ್ಯರಾಗಿದ್ದರೂ, ಆ ಬಗ್ಗೆ ತನಿಖೆಯಾಗಬೇಕಿದೆ. ವ್ಯಕ್ತಿಯನ್ನು ಕೊಂದಿದ್ದು, ಸಾಮಾನ್ಯ ವ್ಯಕ್ತಿಯ ಅಥವಾ ಭಯೋತ್ಪಾದಕರೇ ಎಂಬುದು ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.

ಇಂತಹ ದಾಳಿಗಳು ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತವೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೂ ದಾಳಿ ಮಾಡಲಾಗಿದೆ. ಇದು ದುರಂತ, ಇದು ನಮ್ಮ ಪ್ರವಾಸೋದ್ಯಮ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ಫಾರೂಕ್ ಅಬ್ದುಲ್ಲಾ
ಜಮ್ಮು-ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿ: ಬಿಜೆಪಿ ಮಾಜಿ ಸರಪಂಚ್ ಸಾವು, ಜೈಪುರ ಮೂಲದ ದಂಪತಿ ಗಾಯ

ದಾಳಿ ಸಂಬಂಧ ಅಂತಾರಾಷ್ಟ್ರೀಯ ಒತ್ತಡವನ್ನು ಸೃಷ್ಟಿಯಾಗಬೇಕಿದೆ. ಇತ್ತೀಚಿನ ಹತ್ಯೆಗಳ ಬಗ್ಗೆ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ತನಿಖೆಯ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಭಯೋತ್ಪಾದನೆ ನಿಲ್ಲದ ಹೊರತು ನೆರೆಯ ರಾಷ್ಟ್ರ (ಪಾಕಿಸ್ತಾನ)ದೊಂದಿಗೆ ಮಾತುಕತೆ ಸಾಧ್ಯವಿಲ್ಲ. ಆ ರಾಷ್ಟ್ರದ ನಮಗೆ ಸಹಕಾರ ಬೇಕು, ಇಲ್ಲಿಗೆ ಬಂದು ಅಮಾಯಕರನ್ನು ಕೊಲ್ಲುತ್ತಿರುವ ವ್ಯಕ್ತಿಯನ್ನು ಗುರುತಿಸಬೇಕು. ಅಂತರಾಷ್ಟ್ರೀಯ ಒತ್ತಡ ಹೇರಬೇಕು. ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳು ಈ ವಿಷಯವನ್ನು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com