Patanjali Soanpapadi case: ಪತಂಜಲಿ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ; ಮೂವರಿಗೆ ಜೈಲು ಶಿಕ್ಷೆ

ಪತಂಜಲಿ ಸಂಸ್ಥೆಯ ಸೋನ್​ಪಾಪ್ಡಿ ಸಿಹಿ ತಿನಿಸು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
Patanjali
ಪತಂಜಲಿ
Updated on

ಡೆಹ್ರಾಡೂನ್: ಪತಂಜಲಿ ಸಂಸ್ಥೆಯ ಸೋನ್​ಪಾಪ್ಡಿ ಸಿಹಿ ತಿನಿಸು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಉತ್ತರಾಖಂಡದ ರುದ್ರಾಪುರದಲ್ಲಿರುವ ಪರೀಕ್ಷಾ ಪ್ರಯೋಗಾಲಯದಲ್ಲಿ ಪತಂಜಲಿಯ ಆಹಾರ ಉತ್ಪನ್ನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ್ ಲಿಮಿಟೆಡ್‌ನ ಸಹಾಯಕ ಮ್ಯಾನೇಜರ್ ಸೇರಿದಂತೆ ಮೂವರಿಗೆ ಪಿಥೋರಘರ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

2019 ರಲ್ಲಿ ಪಿಥೋರಗಢ್‌ನ ಬೆರಿನಾಗ್‌ನಲ್ಲಿರುವ ಮುಖ್ಯ ಮಾರುಕಟ್ಟೆಯಲ್ಲಿರುವ ಲೀಲಾ ಧಾರ್ ಪಾಠಕ್ ಅವರ ಅಂಗಡಿಯಲ್ಲಿ ಆಹಾರ ಸುರಕ್ಷತಾ ನಿರೀಕ್ಷಕರು ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಳಿಕ ಪಿಥೋರಗಢದ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಬೆರಿನಾಗ್ ಮಾರುಕಟ್ಟೆಯ ಅಂಗಡಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

Patanjali
ಪತಂಜಲಿ ದಿವ್ಯ ಫಾರ್ಮಸಿಯ 10 ಉತ್ಪನ್ನಗಳ ಪರವಾನಗಿ ರದ್ದು!

ಇದೀಗ ಇದರ ಪರೀಕ್ಷಾ ವರದಿಯಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪಿಥೋರಗಢದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ಸಂಜಯ್ ಸಿಂಗ್ ಅವರು ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್, ಲಕ್ಸಾರ್‌ನ ಸಹಾಯಕ ಜನರಲ್ ಮ್ಯಾನೇಜರ್ ಅಭಿಷೇಕ್ ಕುಮಾರ್ ಅವರಿಗೆ ಶಿಕ್ಷೆ ವಿಧಿಸಿದರು.

ಅಜಯ್ ಜೋಶಿ, ಕನ್ಹಾ ಜಿ ಡಿಸ್ಟ್ರಿಬ್ಯೂಟರ್ ಪ್ರೈವೇಟ್ ಲಿಮಿಟೆಡ್ ರಾಮನಗರದ ಸಹಾಯಕ ವ್ಯವಸ್ಥಾಪಕ; ಮತ್ತು ಅಂಗಡಿಯವ ಲೀಲಾಧರ್ ಪಾಠಕ್ ಅವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ರ ಸೆಕ್ಷನ್ 59 ರ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯವು ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ಅಜಯ್ ಜೋಶಿಗೆ ತಲಾ 10,000 ರೂ. ದಂಡ ವಿಧಿಸಿದರೆ, ಅಭಿಷೇಕ್ ಕುಮಾರ್ 25,000 ರೂ. ಮತ್ತು ಪಾಠಕ್ 5,000 ರೂ. ದಂಡ ವಿಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com