ಮುಂಬೈನಲ್ಲಿ ನಿಧಾನಗತಿಯ ಮತದಾನ: ಗಮನಹರಿಸುವಂತೆ ಚುನಾವಣಾ ಆಯೋಗಕ್ಕೆ ಫಡ್ನವೀಸ್ ಒತ್ತಾಯ

ವಾಣಿಜ್ಯ ನಗರಿ ಮುಂಬೈಯಲ್ಲಿ ನಿಧಾನಗತಿಯ ಮತದಾನದ ದೂರುಗಳನ್ನು ಪರಿಶೀಲಿಸುವಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಫಡ್ನವೀಸ್
ಫಡ್ನವೀಸ್

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ನಿಧಾನಗತಿಯ ಮತದಾನದ ದೂರುಗಳನ್ನು ಪರಿಶೀಲಿಸುವಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಮುಂಬೈನ ಆರು ಸೇರಿದಂತೆ ಮಹಾರಾಷ್ಟ್ರದ 13 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಯವರೆಗೂ ಮತದಾನ ಮಾಡಲು ಅವಕಾಶವಿದೆ.

ಮಧ್ಯಾಹ್ನ 1 ಗಂಟೆಯವರೆಗೆ ಮುಂಬೈ ಉತ್ತರ ಕ್ಷೇತ್ರದಲ್ಲಿ ಶೇ 26.78, ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಲ್ಲಿ ಶೇ 28.05, ಮುಂಬೈ ಈಶಾನ್ಯದಲ್ಲಿ ಶೇ 28.82, ಮುಂಬೈ ವಾಯವ್ಯ ಶೇ 28.41, ಮುಂಬೈ ದಕ್ಷಿಣ ಶೇ 24.46 ಮತ್ತು ಮುಂಬೈ ಸೌತ್ ಸೆಂಟ್ರಲ್ ಶೇ 27.21 ಮತದಾನವಾಗಿದೆ ಎಂದು ಅಧಿಕೃತ ಮಾಹಿತಿ ನೀಡಿದೆ.

ಫಡ್ನವೀಸ್
ಲೋಕಸಭಾ ಚುನಾವಣೆ 2024: 5ನೇ ಹಂತದ ಮತದಾನ ಪ್ರಗತಿಯಲ್ಲಿ, ಈವರೆಗೂ ಶೇ.36.73ರಷ್ಟು ಮತದಾನ

ಮುಂಬೈನಲ್ಲಿ ನಿಧಾನಗತಿಯ ಮತದಾನದ ದೂರುಗಳನ್ನು ಪರಿಶೀಲಿಸುವಂತೆ ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇನೆ. ಒಟ್ಟಾರೆ ಮತದಾನದ ವೇಗವು ತುಂಬಾ ನಿಧಾನವಾಗಿದೆ ಎಂದು ಹಲವಾರು ದೂರುಗಳು ಬಂದಿವೆ ಎಂದು ಫಡ್ನವೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂಬೈನಲ್ಲಿ ಮತದಾನದ ಆರಂಭದಿಂದಲೇ ಹಲವಾರು ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಚಿತ್ರರಂಗದ ಗಣ್ಯರು ಮತದಾನ ಮಾಡಲು ಮುಂದಾದರು. ಮತಗಟ್ಟೆಗಳ ಹೊರಗಿನ ಸೌಲಭ್ಯಗಳ ಬಗ್ಗೆ ಮತದಾರರಿಂದ ಸಾಕಷ್ಟು ದೂರುಗಳಿವೆ ಎಂದು ಶಿವಸೇನೆ-ಯುಬಿಟಿ ನಾಯಕ ಆದಿತ್ಯ ಠಾಕ್ರೆ, ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com