
ಭುವನೇಶ್ವರ: ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಲೋಕಸಭೆಯಲ್ಲಿ ತಮ್ಮ ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಮತ್ತು ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
'ಇಡೀ ರಾಷ್ಟ್ರಕ್ಕೆ ನಮ್ಮ ಕಾರ್ಯತಂತ್ರ ಒಂದೇ ಆಗಿದ್ದು, ಫಿರ್ ಏಕ್ ಬಾರ್ ಮೋದಿ ಸರ್ಕಾರ್. ಔರ್ ಚಾರ್ ಜೂನ್ 400 ಪಾರ್ ಆಗಿದೆ' ಎಂದು ಮೋದಿ ಭಾನುವಾರ ರಾತ್ರಿ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಯಾವುದೇ ಶಕ್ತಿ ಅಥವಾ ಅಸ್ತಿತ್ವವಿಲ್ಲ ಎಂಬ ಮಿಥ್ಯೆಯನ್ನು ವಿರೋಧಿಗಳು ಸೃಷ್ಟಿಸಿದ್ದಾರೆ. 2019ರ ಚುನಾವಣೆಯನ್ನು ನೋಡಿ. ಆಗಲೂ ದಕ್ಷಿಣದಲ್ಲಿ ಅತಿದೊಡ್ಡ ಪಕ್ಷ ಬಿಜೆಪಿಯಾಗಿ ಹೊರಹೊಮ್ಮಿತ್ತು. ಮತ್ತೊಮ್ಮೆ ನಾನು ಹೇಳುತ್ತೇನೆ: ದಕ್ಷಿಣದಲ್ಲಿ ಈ ಬಾರಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ ಮತ್ತು ಅದರ ಮಿತ್ರಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಸೇರಿಸುತ್ತವೆ' ಎಂದು ಅವರು ಹೇಳಿದರು.
ಪಿಟಿಐ ಸಲ್ಲಿಸಿದ ಪ್ರಶ್ನೆಗಳಿಗೆ ಪ್ರತ್ಯೇಕ ಲಿಖಿತ ಉತ್ತರದಲ್ಲಿ, ನಾವು ದಕ್ಷಿಣ ಭಾರತದಲ್ಲಿ ಏಕೈಕ ದೊಡ್ಡ ಪಕ್ಷವಾಗುತ್ತೇವೆ ಮತ್ತು ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ನಾವು ಗೆಲ್ಲುತ್ತೇವೆ. ನಾವು ಈಗಾಗಲೇ ಮನಸ್ಸಿನ ಹಂಚಿಕೆಯಲ್ಲಿ ಜಿಗಿತವನ್ನು ನೋಡಿದ್ದೇವೆ. ಆ ಪ್ರದೇಶದಾದ್ಯಂತ ನಮಗೆ ಸೀಟು ಹಂಚಿಕೆ ಮತ್ತು ಮತ ಹಂಚಿಕೆಯಲ್ಲಿ ನಾವು ದೊಡ್ಡ ಜಿಗಿತವನ್ನು ಕಾಣುತ್ತೇವೆ' ಎಂದು ಅವರು ಬರೆದಿದ್ದಾರೆ.
543 ಲೋಕಸಭಾ ಸ್ಥಾನಗಳಲ್ಲಿ ದಕ್ಷಿಣ ಭಾರತವು 131 ಸ್ಥಾನಗಳನ್ನು ಹೊಂದಿದೆ. ಸದ್ಯ ಸದನದಲ್ಲಿ ಕರ್ನಾಟಕದಿಂದ ಬಿಜೆಪಿ ಬೆಂಬಲಿತ ಓರ್ವ ಸ್ವತಂತ್ರ ಸದಸ್ಯರನ್ನು ಹೊರತುಪಡಿಸಿ ಬಿಜೆಪಿ 29 ಸದಸ್ಯರನ್ನು ಹೊಂದಿದೆ.
Advertisement