
ಮುಂಬೈ: ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಫ್ಲೆಮಿಂಗೋಗಳ ಹಿಂಡು ವಿಮಾನಕ್ಕೆ ಸಿಲುಕಿ ಕನಿಷ್ಠ 29 ರಾಜಹಂಸಗಳು ಸಾವನ್ನಪ್ಪಿವೆ ಎಂದು ವನ್ಯಜೀವಿ ಕಲ್ಯಾಣ ಗುಂಪಿನ ಪ್ರತಿನಿಧಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಘಾಟ್‌ಕೋಪರ್‌ನ ಕೆಲವು ಸ್ಥಳಗಳಲ್ಲಿ ಸತ್ತ ಪಕ್ಷಿಗಳು ಕಾಣಿಸಿಕೊಂಡಿರುವ ಬಗ್ಗೆ ಜನರಿಂದ ವಿವಿಧ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ರೆಸ್ಕಿಂಕ್ ಅಸೋಸಿಯೇಶನ್ ಫಾರ್ ವೈಲ್ಡ್‌ಲೈಫ್ ವೆಲ್ಫೇರ್ (RAWW) ಸಂಸ್ಥಾಪಕ ಮತ್ತು ಅರಣ್ಯ ಇಲಾಖೆಯ ಗೌರವ ವನ್ಯಜೀವಿ ವಾರ್ಡನ್ ಪವನ್ ಶರ್ಮಾ ಅವರು ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ಕ್ಷಣಗಳ ಮೊದಲು ವಿಮಾನ ಪಕ್ಷಗಳ ಹಿಂಡುಗಳಿಗೆ ಡಿಕ್ಕಿ ಹೊಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಅರಣ್ಯ ಇಲಾಖೆಯ ಮ್ಯಾಂಗ್ರೋವ್ ಸೆಲ್ ಮತ್ತು RAWW ತಂಡಗಳು ಈ ಪ್ರದೇಶದಲ್ಲಿ 29 ಸತ್ತ ಫ್ಲೆಮಿಂಗೋಗಳನ್ನು ಪತ್ತೆಹಚ್ಚಿದೆ.
ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪಕ್ಷಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ
Advertisement