ಅಂಬೇಡ್ಕರ್ ಇಲ್ಲದಿರುತ್ತಿದ್ದರೆ SC-ST ಗಳಿಗೆ ಮೀಸಲಾತಿ ನೀಡಲು ನೆಹರೂ ಬಿಡುತ್ತಿರಲಿಲ್ಲ: ಪ್ರಧಾನಿ ಮೋದಿ

ಡಾ ಬಿ ಆರ್ ಅಂಬೇಡ್ಕರ್ ಅವರು ಇಲ್ಲದಿರುತ್ತಿದ್ದರೆ ನೆಹರೂ ಅವರು ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಇಲ್ಲದಿರುತ್ತಿದ್ದರೆ SC-ST ಗಳಿಗೆ ಮೀಸಲಾತಿ ನೀಡಲು ನೆಹರೂ ಬಿಡುತ್ತಿರಲಿಲ್ಲ: ಪ್ರಧಾನಿ ಮೋದಿ
Updated on

ಬಿಹಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳಿಂದ(SC, ST and OBCs) ಮೀಸಲಾತಿಯನ್ನು ಕಸಿದುಕೊಂಡು, ವೋಟ್ ಜಿಹಾದ್‌ನಲ್ಲಿ ತೊಡಗಿರುವವರಿಗೆ ಅದನ್ನು ಒಪ್ಪಿಸಲು ಕಾಂಗ್ರೆಸ್ ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಡಾ ಬಿ ಆರ್ ಅಂಬೇಡ್ಕರ್ ಅವರು ಇಲ್ಲದಿರುತ್ತಿದ್ದರೆ ನೆಹರೂ ಅವರು ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬಿಹಾರದ ಪೂರ್ವ ಚಂಪಾರಣ್ ಲೋಕಸಭಾ ಕ್ಷೇತ್ರದಲ್ಲಿ ಅವರು ಇಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಇಂಡಿಯಾ ಒಕ್ಕೂಟ ಭ್ರಷ್ಟಾಚಾರ, ತುಷ್ಟೀಕರಣ ರಾಜಕೀಯ ಮತ್ತು "ವಿಕೃತ ಸನಾತನ ವಿರೋಧಿ ಮನಸ್ಥಿತಿ"ಯನ್ನು ಹೊಂದಿದೆ, ಜೂನ್ 4 ರ ಚುನಾವಣಾ ಫಲಿತಾಂಶ ಪ್ರಕಟ ನಂತರ ಇವೆಲ್ಲಕ್ಕೂ ದೊಡ್ಡ ಹೊಡೆತ ಬೀಳಲಿದೆ ಎಂದರು.

ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರಂತಹ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ಮೋದಿ, ಅವರೆಲ್ಲಾ ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಎಂದರು.

ಅಂಬೇಡ್ಕರ್ ಇಲ್ಲದಿರುತ್ತಿದ್ದರೆ SC-ST ಗಳಿಗೆ ಮೀಸಲಾತಿ ನೀಡಲು ನೆಹರೂ ಬಿಡುತ್ತಿರಲಿಲ್ಲ: ಪ್ರಧಾನಿ ಮೋದಿ
ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಲಿದೆ; 400 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಗೆ ಗೆಲುವು: ಪ್ರಧಾನಿ ನರೇಂದ್ರ ಮೋದಿ (ಸಂದರ್ಶನ)

ಭ್ರಷ್ಟಾಚಾರ, ತುಷ್ಟೀಕರಣ ರಾಜಕೀಯದ ಪರವಾಗಿ ನಿಂತಿರುವ ಇಂಡಿಯಾ ಒಕ್ಕೂಟದ ಕೆಟ್ಟ ಕೆಲಸಗಳು ಈ ರಾಷ್ಟ್ರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಇದು 'ತುಕ್ಡೆ-ತುಕ್ಡೆ' ಗ್ಯಾಂಗ್ ಮತ್ತು ಸನಾತನ ಧರ್ಮವನ್ನು ಧಿಕ್ಕರಿಸುವ ವಿಕೃತ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದರು.

ಮೊದಲ ಹಂತದ ಚುನಾವಣೆಯಲ್ಲೇ ಇಂಡಿಯಾ ಒಕ್ಕೂಟ ದಣಿದು ಹೋಗಿತ್ತು. ನಂತರದ ಹಂತಗಳಲ್ಲಿ ಸೋಲು ಕಂಡಿತ್ತು. ಉಳಿದ ಎರಡು ಹಂತಗಳಲ್ಲಿ ಇದೇ ಟ್ರೆಂಡ್‌ ಮುಂದುವರಿಯಲಿದ್ದು, ಜೂನ್‌ 4ರಂದು ಫಲಿತಾಂಶ ಹೊರಬಿದ್ದ ಮೇಲೆ ಪ್ರತಿಪಕ್ಷಗಳ ಮೈತ್ರಿಯ ಉದ್ದೇಶಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com