ಲೋಕಸಭಾ ಚುನಾವಣೆ: ಬಿಜೆಪಿಗೆ ಬಹುಮತ ಬರದಂತೆ ತಡೆಯುವ ವಿಶ್ವಾಸ I.N.D.I.A ಬಣಕ್ಕಿದೆ- ಖರ್ಗೆ

ತಮ್ಮ ಪಕ್ಷ ಮತ್ತು INDIA ಬಣದ ಬಗ್ಗೆ ಜನರ ಪ್ರತಿಕ್ರಿಯೆ ಗಮನಾರ್ಹವಾಗಿ ಬದಲಾಗಿದೆ ಮತ್ತು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರದಂತೆ ತಡೆಯುವ ವಿಶ್ವಾಸವನ್ನು ವಿಪಕ್ಷಗಳ ಮೈತ್ರಿಕೂಟ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಖರ್ಗೆ
ಖರ್ಗೆ
Updated on

ನವದೆಹಲಿ: ತಮ್ಮ ಪಕ್ಷ ಮತ್ತು INDIA ಬಣದ ಬಗ್ಗೆ ಜನರ ಪ್ರತಿಕ್ರಿಯೆ ಗಮನಾರ್ಹವಾಗಿ ಬದಲಾಗಿದೆ ಮತ್ತು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರದಂತೆ ತಡೆಯುವ ವಿಶ್ವಾಸವನ್ನು ವಿಪಕ್ಷಗಳ ಮೈತ್ರಿಕೂಟ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಹರಡುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಈಗ ಜನರು ಹೋರಾಡುತ್ತಿದ್ದಾರೆ.ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟ ಎಂದು ಜನರು ಭಾವಿಸಿದ್ದು, ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು.

ರಾಮಮಂದಿರ, ಹಿಂದೂ-ಮುಸ್ಲಿಂ ಮತ್ತು ಭಾರತ-ಪಾಕಿಸ್ತಾನದ ಹೆಸರಿನಲ್ಲಿ ಬಿಜೆಪಿ ಪದೇ ಪದೇ ಜನರನ್ನು ಪ್ರಚೋದಿಸುತ್ತದೆ ಮತ್ತು "ಭಾವನಾತ್ಮಕವಾಗಿ ಲೂಟಿ" ಮಾಡುತ್ತಿದೆ ಎಂದು ಆರೋಪಿಸಿದ ಖರ್ಗೆ ಅವರು ಈಗ ಅವರ ನಿಜವಾದ ಬಣ್ಣವನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ದೇಶಾದ್ಯಂತ ಪ್ರಯಾಣಿಸಿದ ನಂತರ, ನಮ್ಮ ಪರವಾಗಿ ದೊಡ್ಡ ಒಲವಿದೆ ಎಂಬ ಭಾವನೆ ನಮಗೆ ಬರುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತು ಮೈತ್ರಿ ಪಾಲುದಾರರು ಈ ಬಾರಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಬೇಕಾದ ಸ್ಥಾನಗಳನ್ನು ಪಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸುವುದಾಗಿ ತಿಳಿಸಿದರು.

ಖರ್ಗೆ
ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಲಿದೆ; 400 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಗೆ ಗೆಲುವು: ಪ್ರಧಾನಿ ನರೇಂದ್ರ ಮೋದಿ (ಸಂದರ್ಶನ)

"ಸಾರ್ವಜನಿಕರೇ ನಮಗಾಗಿ ಹೋರಾಡುತ್ತಿದ್ದಾರೆ. ಅದು ನಮಗಾಗಿ ಮಾತ್ರ ಅಲ್ಲ. ಜನರು ನಾವು ಅನುಸರಿಸುವ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದಾರೆ ಮತ್ತು ನಮಗಾಗಿ ಹೋರಾಡುತ್ತಿದ್ದಾರೆ, ಬಿಜೆಪಿ ಸಂಖ್ಯೆ ಕುಸಿಯಲಿದ್ದು, ನಾವು ಮುಂದುವರಿಯುತ್ತೇವೆ ಎಂಬುದು ಸ್ಪಷ್ಟವಾಗಿದೆ ಎಂದು ಖರ್ಗೆ ಹೇಳಿದರು. .

ಅವರಿಗೆ ಎಲ್ಲಿಂದ ವಿಶ್ವಾಸ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಜನರ ಪ್ರತಿಕ್ರಿಯೆ ಮತ್ತು ಅವರು ಹೇಗೆ ಬೆಂಬಲಿಸಲು ಪ್ರಾರಂಭಿಸಿದ್ದಾರೆ ಮತ್ತು ಅವರ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದು ನನಗೆ ಅಂತಹ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com