
ನವದೆಹಲಿ: ಲೋಕಸಭಾ ಚುನಾವಣೆಗೆ ಪ್ರಚಾರ ಕೈಗೊಳ್ಳುವುದಕ್ಕಾಗಿ ಜಮೀನಿನ ಮೇಲೆ ಬಂಧನದಿಂದ ಬಿಡುಗಡೆಯಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಾಕ್ ನಾಯಕನ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಇಂದು ಮಾತದಾನ ಮಾಡಿದ್ದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ, ಹಣದುಬ್ಬರ, ನಿರುದ್ಯೋಗಗಳ ವಿರುದ್ಧ ಮತದಾನ ಮಾಡಿದ್ದೇನೆ ಎಂದು ಬರೆದಿದ್ದರು, ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಪಾಕ್ ನಾಯಕ ಫವಾದ್ ಹುಸೇನ್ ಚೌಧರಿ ದ್ವೇಷ ಮತ್ತು ತೀವ್ರವಾದಿ ಶಕ್ತಿಗಳನ್ನು ಶಾಂತಿ ಮತ್ತು ಸೌಹಾರ್ದತೆ ಸೋಲಿಸಲಿ ಎಂದು ಪ್ರತಿಕ್ರಿಯೆ ನೀಡಿದ್ದರು.
ಫವಾದ್ ಹುಸೇನ್ ಚೌಧರಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದರ ಬದಲು ಫವಾದ್ ಹುಸೇನ್ ತಮ್ಮ ದೇಶದ ಅತ್ಯಂತ ಕೆಟ್ಟ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲಿ ಎಂದು ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ್ದಾರೆ.
ನಮ್ಮ ವಿಷಯಗಳನ್ನು ನಿರ್ವಗಣೆ ಮಾಡಿಕೊಳ್ಳುವುದಕ್ಕೆ ನಮಗೆ ಸಾಮರ್ಥ್ಯವಿದೆ. ಪಾಕಿಸ್ತಾನದ ಪರಿಸ್ಥಿತಿ ಬಹಳ ಚಿಂತಾಜಕನವಾಗಿದೆ. ನಿಮ್ಮ ದೇಶದ ಬಗ್ಗೆ ನೀವು ಗಮನ ಹರಿಸಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಚುನಾವಣೆ ನಮ್ಮ ಆಂತರಿಕ ವಿಷಯ. ಭಯೋತ್ಪಾದಕರನ್ನು ಉತ್ತೇಜಿಸುವವರು ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Advertisement