
ಲಖನೌ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ 13 ಮಂದಿ ಸಿಬ್ಬಂದಿ ಜ್ವರ, ಬಿಪಿಯಿಂದ ಸಾವನ್ನಪ್ಪಿದ್ದಾರೆ. ಈ 13 ಮಂದಿಗೆ ತೀವ್ರವಾದ ಜ್ವರ ಹಾಗೂ ಅಧಿಕ ರಕ್ತದ ಒತ್ತಡ ಎದುರಾಗಿದ್ದರಿಂದ ಅವರನ್ನು ಉತ್ತರ ಪ್ರದೇಶದ ಮಿರ್ಜಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಿಬ್ಬಂದಿಗಳ ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಸಾವನ್ನಪ್ಪಿದ ಸಿಬ್ಬಂದಿಗಳ ಪೈಕಿ ಹೋಮ್ ಗಾರ್ಡ್ ಯೋಧರು, ಮೂವರು ನೈರ್ಮಲ್ಯ ಕಾರ್ಮಿಕರು, ಮುಖ್ಯ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಕ್ಲರ್ಕ್ ಹುದ್ದೆಯಲ್ಲಿದ್ದ ನೌಕರ, ಓರ್ವ ಚಕ್ ಬಂದಿ ಅಧಿಕಾರಿ, ಓರ್ವ ಪ್ಯೂನ್ ಇದ್ದಾರೆ ಎಂದು ಮಾ ವಿದ್ಯಾವಾಸಿನಿ ಸ್ವಾಯತ್ತ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ. ರಾಜ್ ಬಹದ್ದೂರ್ ಕಮಲ್ ಹೇಳಿದ್ದಾರೆ.
ಸಿಬ್ಬಂದಿಗಳನ್ನು ಆಸ್ಪತ್ರೆಗೆ ಕರೆತರುವಾಗ ಅವರಿಗೆ ತೀವ್ರ ಜ್ವರ ಮತ್ತು ಅಧಿಕ ರಕ್ತದೊತ್ತಡ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನ ಕಂಡುಬರುತ್ತಿದೆ. ಮಿರ್ಜಾಪುರದಲ್ಲಿ ಶನಿವಾರ ಮತದಾನ ನಡೆಯಲಿದೆ.
Advertisement