ಲೋಕಸಭಾ ಚುನಾವಣೆಗೆ ಅಡ್ಡಿಪಡಿಸಲು ಇಸ್ರೇಲಿ ಸಂಸ್ಥೆ ಯತ್ನ, ಬಿಜೆಪಿ ವಿರೋಧಿ ಅಜೆಂಡಾಗೆ ಉತ್ತೇಜನ!

ಭಾರತದ ಲೋಕಸಭಾ ಚುನಾವಣೆಗೆ ಅಡ್ಡಿಪಡಿಸುವುದಕ್ಕೆ ಇಸ್ರೇಲಿ ಸಂಸ್ಥೆ ಯತ್ನಿಸಿತ್ತು ಎಂಬ ಮಾಹಿತಿ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೂ 4 ದಿನಗಳ ಮುನ್ನ ಬಹಿರಂಗವಾಗಿದೆ.
ಲೋಕಸಭಾ ಚುನಾವಣೆಗೆ ಅಡ್ಡಿಪಡಿಸಲು ಇಸ್ರೇಲಿ ಸಂಸ್ಥೆ ಯತ್ನ, ಬಿಜೆಪಿ ವಿರೋಧಿ ಅಜೆಂಡಾಗೆ ಉತ್ತೇಜನ!
Updated on

ನವದೆಹಲಿ: ಭಾರತದ ಲೋಕಸಭಾ ಚುನಾವಣೆಗೆ ಅಡ್ಡಿಪಡಿಸುವುದಕ್ಕೆ ಇಸ್ರೇಲಿ ಸಂಸ್ಥೆ ಯತ್ನಿಸಿತ್ತು ಎಂಬ ಮಾಹಿತಿ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೂ 4 ದಿನಗಳ ಮುನ್ನ ಬಹಿರಂಗವಾಗಿದೆ.

ಓಪನ್ ಎಐ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಕೃತಕ ಬುದ್ಧಿಮತ್ತೆಯ ಮಾದರಿಗಳನ್ನು ಬಳಸಿಕೊಂಡು ಭಾರತದಲ್ಲಿನ ಚುನಾವಣೆಗೆ ಅಡ್ಡಿಪಡಿಸುವ ಯತ್ನ ನಡೆದಿತ್ತು ಎಂದು ಓಪನ್ ಎಐ ನ ಬೆದರಿಕೆ ಇಂಟೆಲ್ ವರದಿ ಹೇಳಿದ್ದು, ಇಸ್ರೇಲಿ ಸಂಸ್ಥೆಯೊಂದು ಭಾರತ ಕೇಂದ್ರಿತ ಕಾಮೆಂಟ್ ಗಳನ್ನು ಸೃಷ್ಟಿಸಲು ಶುರು ಮಾಡಿತ್ತು, ಇದರಲ್ಲಿ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿ, ವಿಪಕ್ಷ ಕಾಂಗ್ರೆಸ್ ನ್ನು ಹೊಗಳಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಭಾರತೀಯ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದ ಚಟುವಟಿಕೆಯನ್ನು ಮೇ ತಿಂಗಳಲ್ಲಿ ಗುರುತಿಸಲಾಯಿತು ಎಂದು ವರದಿ ಉಲ್ಲೇಖಿಸಿದ್ದು, "ನೆಟ್‌ವರ್ಕ್ ನ್ನು ಇಸ್ರೇಲ್‌ನ ರಾಜಕೀಯ ಪ್ರಚಾರ ನಿರ್ವಹಣಾ ಸಂಸ್ಥೆಯಾದ STOIC ನಿರ್ವಹಿಸುತ್ತಿತ್ತು" ಎಂದು ಓಪನ್ ಎಐ ಹೇಳಿದೆ. ಸಾರ್ವಜನಿಕ ಅಭಿಪ್ರಾಯವನ್ನು ಬದಲಾವಣೆ ಮಾಡಲು ಅಥವಾ ರಾಜಕೀಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ರಹಸ್ಯ ಕಾರ್ಯಾಚರಣೆಗಳಿಗಾಗಿ AI ನ್ನು ಬಳಸಿದ್ದನ್ನು OpenAI ವರದಿ ಉಲ್ಲೇಖಿಸಿದೆ.

ಈ ಅಪಾಯಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದವರು ನಮ್ಮ ಮಾದರಿಗಳನ್ನು IO ಶ್ರೇಣಿಗಾಗಿ ಬಳಸುತ್ತಿರುವುದನ್ನು ನಾವು ಗಮನಿಸಿದಾಗ, ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರುವುದು ತಿಳಿಯಿತು" ಎಂದು ವರದಿ ಉಲ್ಲೇಖಿಸಿದೆ. ರಹಸ್ಯ ಕಾರ್ಯಾಚರಣೆಗಳಿಗಾಗಿ ಕಂಟೆಂಟ್ ರಚಿಸಲು ಮತ್ತು ಅದನ್ನು ಎಡಿಟ್ ಮಾಡುವುದಕ್ಕೆ ಇಸ್ರೇಲ್‌ನಿಂದ ಕಾರ್ಯನಿರ್ವಹಿಸುವ ಖಾತೆಗಳ ಸಮೂಹವನ್ನು ಬಳಸಲಾಗಿದ್ದು, ಈ ರೀತಿ ಸೃಷ್ಟಿಸಲಾಗಿದ್ದ ಕಂಟೆಂಟ್ ನ್ನು X, Facebook, Instagram, ವೆಬ್‌ಸೈಟ್‌ಗಳು ಮತ್ತು YouTube ನಲ್ಲಿ ಹಂಚಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆಗೆ ಅಡ್ಡಿಪಡಿಸಲು ಇಸ್ರೇಲಿ ಸಂಸ್ಥೆ ಯತ್ನ, ಬಿಜೆಪಿ ವಿರೋಧಿ ಅಜೆಂಡಾಗೆ ಉತ್ತೇಜನ!
ಭಾರತದ ಲೋಕಸಭಾ ಚುನಾವಣೆಯಲ್ಲಿ ಅಮೇರಿಕಾ ಹಸ್ತಕ್ಷೇಪ; ರಷ್ಯಾ ಗಂಭೀರ ಆರೋಪ

"ಮೇ ಆರಂಭದಲ್ಲಿ, ಇಂಗ್ಲಿಷ್ ಭಾಷೆಯ ಕಂಟೆಂಟ್ ನೊಂದಿಗೆ ಭಾರತದಲ್ಲಿ ಪ್ರೇಕ್ಷಕರನ್ನು ಗುರಿಯಾಗಿಸಲು ಪ್ರಾರಂಭಿಸಿತು" ಎಂದು ವರದಿ ಹೇಳಿದೆ. OpenAI ಡಿಸೆಂಬರ್ 2015 ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯಾಗಿದೆ.

ವರದಿಗೆ ಪ್ರತಿಕ್ರಿಯಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್, "ಬಿಜೆಪಿ ಪ್ರಭಾವಿ ಕಾರ್ಯಾಚರಣೆಗಳು, ತಪ್ಪು ಮಾಹಿತಿ ಮತ್ತು ವಿದೇಶಿ ಹಸ್ತಕ್ಷೇಪಗಳ ಗುರಿಯಾಗಿದೆ ಮತ್ತು ಇವುಗಳನ್ನು ಕೆಲವು ಭಾರತೀಯ ರಾಜಕೀಯ ಪಕ್ಷಗಳು/ಅಥವಾ ಅವುಗಳ ಪರವಾಗಿ ಮಾಡಲಾಗುತ್ತಿದೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com