ಪ್ರಧಾನಿ ಮೋದಿಯವರ ಆರ್ಥಿಕ ಸಲಹೆಗಾರ, ಖ್ಯಾತ ಅರ್ಥಶಾಸ್ತ್ರಜ್ಞ ಬಿಬೇಕ್ ದೆಬ್ರಾಯ್‌ ವಿಧಿವಶ

ಬಿಬೇಕ್ ಡೆಬ್ರಾಯ್ ಅವರು ಭಾರತೀಯ ಅರ್ಥಶಾಸ್ತ್ರಜ್ಞ, ಲೇಖಕ ಮತ್ತು ವಿದ್ವಾಂಸರು, ಆರ್ಥಿಕ ನೀತಿ ಮತ್ತು ಸಂಸ್ಕೃತ ಪಠ್ಯಗಳಿಗೆ ನೀಡಿದ ಕೊಡುಗೆಗಳಿಗೆ ಖ್ಯಾತಿ ಪಡೆದವರಾಗಿದ್ದಾರೆ.
Bibek Debroy
ಬಿಬೇಕ್ ದೆಬ್ರಾಯ್‌
Updated on

ನವದೆಹಲಿ: ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಬಿಬೇಕ್ ದೆಬ್ರಾಯ್‌ ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡೆಬ್ರಾಯ್ ಈ ಹಿಂದೆ ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ (ಜಿಐಪಿಇ) ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಬಿಬೇಕ್ ಡೆಬ್ರಾಯ್ ಅವರು ಭಾರತೀಯ ಅರ್ಥಶಾಸ್ತ್ರಜ್ಞ, ಲೇಖಕ ಮತ್ತು ವಿದ್ವಾಂಸರು, ಆರ್ಥಿಕ ನೀತಿ ಮತ್ತು ಸಂಸ್ಕೃತ ಪಠ್ಯಗಳಿಗೆ ನೀಡಿದ ಕೊಡುಗೆಗಳಿಗೆ ಖ್ಯಾತಿ ಪಡೆದವರಾಗಿದ್ದಾರೆ. ಭಾರತದ ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸ್ಥೂಲ ಅರ್ಥಶಾಸ್ತ್ರ, ಸಾರ್ವಜನಿಕ ಹಣಕಾಸು ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿರುವ ದೆಬ್ರಾಯ್ ಆರ್ಥಿಕ ಸುಧಾರಣೆಗಳು, ಆಡಳಿತ ಮತ್ತು ಭಾರತೀಯ ರೈಲ್ವೇಗಳಂತಹ ವಿಷಯಗಳ ಕುರಿತು ವರದಿ ಮಂಡಿಸಿದ್ದಾರೆ.

ಡಾ. ದೆಬ್ರಾಯ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದು, ಡಾ. ಬಿಬೇಕ್ ಡೆಬ್ರಾಯ್ ಜಿ ಅವರು ಒಬ್ಬ ಅತ್ಯುತ್ತಮ ವಿದ್ವಾಂಸರಾಗಿದ್ದರು, ಅರ್ಥಶಾಸ್ತ್ರ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆಧ್ಯಾತ್ಮಿಕತೆ ಮತ್ತು ಹೆಚ್ಚಿನವುಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಪರಿಣತರಾಗಿದ್ದರು. ಅವರ ಕೃತಿಗಳ ಮೂಲಕ, ಅವರು ಅಳಿಸಲಾಗದ ಗುರುತನ್ನು ಮುಂದಿನ ಪೀಳಿಗೆಗೆ ಬಿಟ್ಟು ನಿರ್ಗಮಿಸಿದ್ದಾರೆ. ಸಾರ್ವಜನಿಕ ನೀತಿಗೆ ಅವರ ಕೊಡುಗೆಗಳನ್ನು ಮೀರಿ, ಅವರು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಕೆಲಸ ಕೈಗೆತ್ತಿಕೊಂಡಿದ್ದರು. ಆಮೂಲಕ ಯುವಕರನ್ನು ಪ್ರಾಚೀನ ಗ್ರಂಥಗಳತ್ತ ಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು ಎಂದು ಮೋದಿ ಸ್ಮರಿಸಿದ್ದಾರೆ. ‘ನಾನು ಬಿಬೇಕ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರ ಒಳನೋಟಗಳು ಮತ್ತು ಶೈಕ್ಷಣಿಕ ಪ್ರವಚನದ ಉತ್ಸಾಹವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ’ ಎಂದಿರುವ ಮೋದಿ, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬಿಬೆಕ್‌ ಅವರೊಂದಿಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಡೆಬ್ರಾಯ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಂಕಣಕಾರರೂ ಆಗಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾಶನದ ರಾಮನಾಥ್ ಗೋಯೆಂಕಾ ಉದ್ಘಾಟನಾ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ವಿಜೇತರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

Bibek Debroy
ಜಿಎಸ್‌ಟಿಯಿಂದ ಸರ್ಕಾರಕ್ಕೆ ಆದಾಯ ನಷ್ಟ: ಪ್ರಧಾನಿ ಸಲಹಾ ಮಂಡಳಿ ಮುಖ್ಯಸ್ಥ ಬಿಬೇಕ್ ಡೆಬ್ರಾಯ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com